
ಇದೀಗ ವಿಶೇಷ ರೀತಿಯಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡಲು ಮುಂದಾದ ಹರಿಯಾಣ ರಾಜ್ಯದ ಕರ್ನಲ್ನ ಯುವಕನೊಬ್ಬ ಮದುವೆಗೆ ಮಂಟಪಕ್ಕೆ ಅಲಂಕಾರಗೊಂಡ ಕಾರಿನಲ್ಲಿ ತೆರಳುವ ಬದಲು ಟ್ರ್ಯಾಕ್ಟರ್ನಲ್ಲಿ ತೆರಳುವ ಮೂಲಕ ರೈತರೊಂದಿಗೆ ನಾನಿದ್ದೇನೆ ಎಂಬ ಸಂದೇಶ ಸಾರಿದ್ದಾನೆ.
ಸೆಕ್ಟರ್ 6 ಕರ್ನಲ್ ನಿವಾಸಿ ಸುಮಿತ್ ಧುಲ್ ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನ ಬೆಂಬಲಿಸುವ ಸಲುವಾಗಿ ತಮ್ಮ ಮದುವೆ ದಿನದಂದು ಟ್ರ್ಯಾಕ್ಟರ್ ಚಲಾಯಿಸಿದ್ದಾರೆ.
ತನ್ನ ಅಲಂಕೃತ ಮರ್ಸಿಡಿಸ್ ಬೆಂಜ್ ಕಾರನ್ನ ಬಿಟ್ಟು ಟ್ರ್ಯಾಕ್ಟರ್ನಲ್ಲೇಕೆ ಬಂದ್ರಿ ಎಂದು ಕೇಳಿದ್ರೆ, ನಾನು ರೈತ ಕುಟುಂಬಕ್ಕೆ ಸೇರಿದವನು. ಹೀಗಾಗಿ ರೈತರಿಗೆ ನನ್ನ ಬೆಂಬಲ ಎಂದು ಹೇಳಿದ್ದಾರೆ.