ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾ ಸೋಂಕಿಗೆ ಒಳಗಾಗಿದ್ದ ವೇಳೆ ಆಂಟಿಬಾಡಿ ಕೋವಿಡ್ ಕಾಕ್ಟೇಲ್ ಲಸಿಕೆಯನ್ನ ನೀಡಲಾಗಿತ್ತು. ಇದೀಗ ಹರಿಯಾಣದ 84 ವರ್ಷದ ಮೊಹಬ್ಬತ್ ಸಿಂಗ್ ಕೂಡ ಈ ಲಸಿಕೆಯನ್ನ ಪಡೆಯುತ್ತಿದ್ದಾರೆ.
ಈ ಮೂಲಕ ಟ್ರಂಪ್ಗೆ ನೀಡಿದ್ದ ಕೋವಿಡ್ ಡ್ರಗ್ ಕಾಕ್ಟೇಲ್ ಪಡೆದ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಗುರುಗ್ರಾಮದಲ್ಲಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಮೊಹಬ್ಬತ್ ಸಿಂಗ್ಗೆ 30 ನಿಮಿಷಗಳ ಅವಧಿಯಲ್ಲಿ ಈ ಕಾಕ್ಟೇಲ್ ಡ್ರಗ್ ನೀಡಲಾಗಿದೆ.
ಅಮೆರಿಕದ ರೋಚಿಸ್ ಕಂಪನಿ ಈ ಲಸಿಕೆಯನ್ನ ಅಭಿವೃದ್ಧಿಪಡಿಸಿದ್ದರೆ ಭಾರತದಲ್ಲಿ ಸಿಪ್ಲಾ ಕಂಪನಿ ಈ ಲಸಿಕೆಯನ್ನ ಬಿಡುಗಡೆ ಮಾಡಿದೆ. ಒಂದು ಡೋಸ್ ಕಾಕ್ಟೇಲ್ ಡ್ರಗ್ಗೆ 59 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ.
ಇದು ಇತರೆ ಲಸಿಕೆಯಂತೆ 2 ಡೋಸ್ ರೂಪದಲ್ಲಿ ನೀಡಲಾಗೋದಿಲ್ಲ. ಕೇವಲ ಒಂದು ಡೋಸ್ ಲಸಿಕೆ ಕೋವಿಡ್ ವಿರುದ್ಧದ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಒಂದು ಪ್ಯಾಕ್ ಔಷಧವನ್ನ ಇಬ್ಬರು ರೋಗಿಗಳಿಗೆ ಬಳಕೆ ಮಾಡಬಹುದಾಗಿದೆ.