ದೇಶದಲ್ಲಿ ಕೊರೋನಾ ಸೋಂಕು ದೀಪಾವಳಿ ವೇಳೆಗೆ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಅನಂತ್ ಕುಮಾರ್ ಪ್ರತಿಷ್ಠಾನ ಪ್ರತಿಷ್ಠಾನ ಆಯೋಜಿಸಿದ್ದ ಕೊರೋನಾ ಕಾಲದಲ್ಲಿ ಸಮರ್ಥ ನಾಯಕತ್ವ ಮತ್ತು ದೇಶ ಮೊದಲು ಎಂಬ ವಿಡಿಯೋ ಕಾನ್ಫರೆನ್ಸ್ ಸಭೆಯನ್ನು ದೆಹಲಿಯಿಂದ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಕೊರೊನಾ ಸೋಂಕು ತಡೆಗಟ್ಟಲು ಮೂರು ಔಷಧಗಳು ಕ್ಲಿನಿಕಲ್ ಟ್ರಯಲ್ ಹಂತದಲ್ಲಿವೆ. ವರ್ಷದ ಕೊನೆಗೆ ಭಾರತದಲ್ಲಿಯೇ ಕೊರೋನಾ ಲಸಿಕೆ ಲಭ್ಯವಾಗಲಿದೆ. ಸದ್ಯ ತಾರಕಕ್ಕೆ ಏರುತ್ತಿರುವ ಕೊರೊನಾ ಸೋಂಕು ದೀಪಾವಳಿ ಹಬ್ಬದ ವೇಳೆಗೆ ಇಳಿಮುಖವಾಗಲಿದೆ ಎಂದು ಹೇಳಿದ್ದಾರೆ.
ಕೊರೊನಾ ಸೋಂಕು ತಡೆಯಲು ಭಾರತ ಎಲ್ಲ ಕ್ರಮಕೈಗೊಂಡಿದ್ದು, ದೀಪಾವಳಿ ವೇಳೆಗೆ ನಿಯಂತ್ರಣ ಸಾಧಿಸ ಲಿದೆ. ಕೊರೋನಾ ನಿಯಂತ್ರಣದಲ್ಲಿ ಭಾರತ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.