ಕೊರೊನಾ ಸೋಂಕು ಬರದಂತೆ ತಡೆಯಲು ಮಾಸ್ಕ್ ಮದ್ದು. ಮಾಸ್ಕ್ ಈಗ ಅನಿವಾರ್ಯವಾಗಿದೆ. ವಿಶ್ವದಾದ್ಯಂತ ಅನೇಕ ಮಾಸ್ಕ್ ಗಳು ಬಂದಿವೆ. ಚಿತ್ರವಿಚಿತ್ರ ಮಾಸ್ಕ್ ಮಧ್ಯೆ ಇಲ್ಲೊಂದು ಮಾಸ್ಕ್ ಗಮನ ಸೆಳೆಯುತ್ತಿದೆ. ಅನೇಕ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ.
ಸಾಮಾನ್ಯವಾಗಿ ಕೊರೊನಾ ಸೋಂಕು ಬರದಂತೆ ತಡೆಯಲು ಜನರು ಮೂಗು-ಬಾಯಿಗೆ ಮಾಸ್ಕ್ ಹಾಕಿಕೊಳ್ತಾರೆ. ಆದ್ರೆ ಹರ್ಷ್ ಗೋಯೆಂಕ್ ತಮ್ಮ ಖಾತೆಯಲ್ಲಿ ಮೂಗಿಗೆ ಹಾಕುವ ಮಾಸ್ಕ್ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮೂಗಿನೊಳಗೆ ಹಾಕಿಕೊಳ್ಳುವ ಮಾಸ್ಕ್ ಬಗ್ಗೆ ಹೇಳಲಾಗಿದೆ. ಇದೊಂದು ಇಂಟರೆಸ್ಟಿಂಗ್ ಮಾಸ್ಕ್ ಎಂದು ಹರ್ಷ್ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋವನ್ನು 33 ಸಾವಿರಕ್ಕೂ ಹೆಚ್ಚು ಬಾರಿ ನೋಡಲಾಗಿದೆ. 900ಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಈ ಮಾಸ್ಕ್ ಬಗ್ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಜನರು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಮಾಸ್ಕ್ ಮೂಗಿನೊಳಗೆ ಹಾಕಿದ್ರೆ ಸಮಸ್ಯೆ ಆಗಲ್ವಾ? ಸೀನು ಬಂದ್ರೆ? ಬಾಯಿಗೆ ಹಾಕುವ ಮಾಸ್ಕ್ ಮೂಗಿಗೆ ಹಾಕಿದ್ರೆ ಕೊರೊನಾ ಹೋಗುತ್ತಾ? ಉಸಿರಾಟದ ಜೊತೆ ಮಾಸ್ಕ್ ಮೂಲಕ ಸೋಂಕು ಒಳಗೆ ಹೋಗಲ್ವಾ? ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ.
https://twitter.com/i/status/1321354861040951296