ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗ್ತಿದೆ. ಗಣ್ಯರಿಂದ ಹಿಡಿದು ಜನಸಾಮಾನ್ಯರವರೆಗೆ ಎಲ್ಲರೂ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡ್ತಿದ್ದಾರೆ. 60 ವರ್ಷಗಳಿಂದ ಗುಹೆಯಲ್ಲಿ ವಾಸವಾಗಿರುವ ಸಾಧುವೊಬ್ಬರು ರಾಮ ಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ್ದಾರೆ. 83 ವರ್ಷದ ಸ್ವಾಮಿ ಶಂಕರ್ ದಾಸ್ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ರಿಷಿಕೇಶದ ಗುಹೆಯಲ್ಲಿ ವಾಸವಾಗಿರುವ ಶಂಕರ ದಾಸ್ ರನ್ನು ಸ್ಥಳೀಯರು ಫಕ್ಕಡ್ ಬಾಬಾ ಎಂದು ಕರೆಯುತ್ತಾರೆ. ಗುರುವಾರ ಸ್ಟೇಟ್ ಬ್ಯಾಂಕ್ ಗೆ ತೆರಳಿದ ಶಂಕರ್ ದಾಸ್ 1 ಕೋಟಿ ರೂಪಾಯಿ ಚೆಕ್ ನೀಡಿದ್ದಾರೆ. ಚೆಕ್ ನೋಡಿದ ಬ್ಯಾಂಕ್ ಸಿಬ್ಬಂದಿ ದಂಗಾಗಿದ್ದಾರೆ. ಆದ್ರೆ ಖಾತೆ ಚೆಕ್ ಮಾಡಿದಾಗ ಶಂಕರ್ ದಾಸ್ ಖಾತೆಯಲ್ಲಿ ಹಣವಿರುವುದು ಗೊತ್ತಾಗಿದೆ. ಜೀವನ ಪೂರ್ತಿ ಕೂಡಿಟ್ಟಿದ್ದ ಹಣವನ್ನು ಶಂಕರ್ ದಾಸ್ ರಾಮ ಮಂದಿರ ನಿರ್ಮಾಣಕ್ಕೆ ನೀಡಿದ್ದಾರೆ.
ಇನ್ನೇನು ಅಂತಿಮ ಸಂಸ್ಕಾರವಾಗಲಿದ್ದ ತಾಯಿ ಜೀವಂತ ಇರುವುದನ್ನು ಗುರುತಿಸಿದ ಪುತ್ರಿ
ಶಂಕರ್ ದಾಸ್, ಶಿಷ್ಯರಿಂದ ದಾನವಾಗಿ ಬಂದ ಹಣವನ್ನು ಬ್ಯಾಂಕ್ ನಲ್ಲಿಟ್ಟಿದ್ದರು. ದೇಣಿಗೆಯನ್ನು ರಹಸ್ಯ ದೇಣಿಗೆಯಾಗಿ ನೀಡಲು ಶಂಕರ್ ದಾಸ್ ಬಯಸಿದ್ದರು ಎನ್ನಲಾಗಿದೆ. ರಿಷಿಕೇಶ ಸಂತರ ನಗರ. ಅಲ್ಲಿನ ಕಾಡು, ಗುಹೆಗಳಲ್ಲಿ ಸಂತರನ್ನು ಕಾಣಬಹುದು. ಅನೇಕ ವರ್ಷಗಳಿಂದ ತಪಸ್ಸಿನಲ್ಲಿರುವ ಅನೇಕ ಸಂತರು ಅಲ್ಲಿ ಕಂಡು ಬರ್ತಾರೆ.