ಕೊರೊನಾ ವೈರಸ್ ಎರಡನೇ ಅಲೆ ನಿಗೂಢ ರೂಪದಲ್ಲಿ ಯುವ ಜನರನ್ನು ಕೊಲ್ಲುತ್ತಿದೆ. ಯುವಕರಿಗೆ ತಿಳಿಯದೆ ದಾಳಿ ಮಾಡುವ ವೈರಸ್ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಅದ್ರಲ್ಲಿ ಹ್ಯಾಪಿ ಹೈಪೋಕ್ಸಿಯಾ ಕೂಡ ಒಂದು. ಎರಡನೇ ಅಲೆಯಲ್ಲಿ ಹ್ಯಾಪಿ ಹೈಪೋಕ್ಸಿಯಾ ಕಿರಿಯ ವಯಸ್ಕರನ್ನು ಬಲಿ ಪಡೆಯುತ್ತಿದೆ.
ಆಸ್ಪತ್ರೆಗೆ ದಾಖಲಾದ ಹೆಚ್ಚು ಯುವಕರಲ್ಲಿ ಹ್ಯಾಪಿ ಹೈಪೋಕ್ಸಿಯಾ ಕಾಡಿದೆ. ಇದನ್ನು ಕೊರೊನಾ ರೋಗಿಗಳ ಸೈಲೆಂಟ್ ಕಿಲ್ಲರ್ ಎನ್ನಲಾಗಿದೆ. ಹ್ಯಾಪಿ ಹೈಪೋಕ್ಸಿಯಾ ಕಾರಣಕ್ಕೆ ಹೆಚ್ಚಿನ ಯುವಕರು ಸಾವನ್ನಪ್ಪುತ್ತಿದ್ದಾರೆ. ಇದ್ರ ಯಾವುದೇ ಲಕ್ಷಣ ಕಾಣುವುದಿಲ್ಲ. ರಕ್ತದಲ್ಲಿಯೇ ಆಮ್ಲಜನಕ ತೀವ್ರವಾಗಿ ಕಡಿಮೆಯಾಗುತ್ತದೆ. ಇದು ರೋಗಿಗಳಿಗೆ ತಿಳಿಯುವುದಿಲ್ಲ. ಒಳಗಿನಿಂದಲೇ ದಾಳಿ ನಡೆಸುವ ವೈರಸ್, ತಿಳಿಯದೇ ಸಾವು ತರ್ತಿದೆ.
ವೈರಸ್ ದಾಳಿ ನಡೆಸಿ ಅನೇಕ ದಿನಗಳ ನಂತ್ರವೂ ಉಸಿರಾಟದ ಸಮಸ್ಯೆ ಕಾಡುವುದಿಲ್ಲ. ಹ್ಯಾಪಿ ಹೈಪೋಕ್ಸಿಯಾದಿಂದ ಬಳಲುವ ಜನರ ಆಕ್ಸಿಜನ್ ಮಟ್ಟ ಶೇಕಡಾ 40ರಷ್ಟು ಇಳಿಯುತ್ತದೆ.
ಉಸಿರಾಟದ ತೊಂದರೆ ಇಲ್ಲದಿದ್ದರೂ ಜ್ವರ, ಕೆಮ್ಮು, ಗಂಟಲು ನೋವು ಕಾಡುತ್ತದೆ. ಕೊರೊನಾ ಲಕ್ಷಣದ ಹೊರತಾಗಿ ಹ್ಯಾಪಿ ಹೈಪೋಕ್ಸಿಯಾ ರೋಗಿಗಳ ಚರ್ಮ ನೇರಳೆ ಅಥವಾ ಕೆಂಪಾಗುತ್ತದೆ. ತುಟಿ ನೀಲಿಯಾಗುತ್ತದೆ. ಯಾವುದೇ ದೈಹಿಕ ಶ್ರಮವಿಲ್ಲದೆ ಹೋದ್ರೂ ಬೆವರಲು ಶುರುವಾಗುತ್ತದೆ.