ನವದೆಹಲಿ: ದೇಶದಲ್ಲಿ ಭಾನುವಾರ ಮೃತಪಟ್ಟ ಕೊರೋನಾ ಸೋಂಕಿತರ ಪೈಕಿ ಸರಿ ಸುಮಾರು ಅರ್ಧದಷ್ಟು ಸೋಂಕಿತರು ಮೂರು ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ.
ಅದರಲ್ಲಿಯೂ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಶೇಕಡ 43 ರಷ್ಟು ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 78,512 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 971 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ ಶೇಕಡ 30.48 ರಷ್ಟು ಮಹಾರಾಷ್ಟ್ರದಲ್ಲಿ ವರದಿಯಾಗಿವೆ ಎಂದು ಆರೋಗ್ಯ ಮಂತ್ರಾಲಯ ಮಾಹಿತಿ ನೀಡಿದೆ.
ಇದುವರೆಗೆ ದೇಶಾದ್ಯಂತ 64,469 ಜನ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾನುವಾರ 78,512 ಹೊಸ ಪ್ರಕರಣ ದಾಖಲಾಗಿದ್ದು, 971 ಜನ ಮೃತಪಟ್ಟಿದ್ದಾರೆ. ಇವರಲ್ಲಿ ಶೇಕಡ 21 ರಷ್ಟು ಮಹಾರಾಷ್ಟ್ರ, ಶೇಕಡ 13.5 ರಷ್ಟು ಆಂಧ್ರಪ್ರದೇಶ, ಕರ್ನಾಟಕದಲ್ಲಿ ಶೇಕಡ 11.27 ರಷ್ಟು ಕೇಸ್ ದಾಖಲಾಗಿವೆ.