ಆಂಧ್ರ ಪ್ರದೇಶದಲ್ಲಿ ಹಸುಗೂಸನ್ನು ಭೂಮಿಯಲ್ಲಿ ಹೂತಿಟ್ಟಿದ್ದ ಘಟನೆ ನಡೆದಿದ್ದು, ಕುರಿ ಕಾಯುವವರಿಂದ ರಕ್ಷಿಸಲ್ಪಟ್ಟಿದೆ.
ಆಂಧ್ರಪ್ರದೇಶದ ಕೃಷ್ಣವರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೊಲವೊಂದರಲ್ಲಿ ಹುಟ್ಟಿದ ಕೆಲವೇ ದಿನಗಳ ಮಗುವೊಂದನ್ನು ಮಣ್ಣಿನಲ್ಲಿ ಹೂತಿಡಲು ಪ್ರಯತ್ನಿಸಿದ್ದಾರೆ. ಮಗುವನ್ನು ಅರ್ಧ ಹೂತಿಟ್ಟ ಕೆಲವೇ ಕ್ಷಣದಲ್ಲಿ ಮಗು ಅಳುತ್ತಿರುವುದನ್ನು ಕುರಿ ಕಾಯುವ ವ್ಯಕ್ತಿಗಳು ಕೇಳಿಸಿಕೊಂಡು, ಮಗುವನ್ನು ಹುಡುಕಿದ್ದಾರೆ.
ಈ ವೇಳೆ ಮಗುವಿನ ಬಾಯಿ ಎಲ್ಲ ಮಣ್ಣಾಗಿದ್ದು, ಮೈಯೆಲ್ಲ ಮಣ್ಣಾಗಿತ್ತು. ಇದರೊಂದಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದವು. ಕೂಡಲೇ ಅಲ್ಲಿದ್ದ ಮಹಿಳೆಯೊಬ್ಬರು ಮಗುವಿಗೆ ಸ್ನಾನ ಮಾಡಿಸಿದ್ದಾರೆ.
ಕೂಡಲೇ ಮಗುವನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದ್ದು, ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆ ನಡೆಯುವ ವೇಳೆ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಇಲಾಖೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.