ಕ್ರಿಸ್ ಮಸ್ ಹಬ್ಬ ಅಂದ್ರೇನೆ ಸಂತೋಷ ಹಾಗೂ ಮೆರುಗನ್ನ ಹಂಚುವ ವಿಶೇಷ ದಿನ. ಆದರೆ ಇಲ್ಲೊಂದು ಕುಟುಂಬ ಕ್ರಿಸ್ಮಸ್ ಗಿಡವನ್ನ ಮನೆಯಲ್ಲಿ ಎಲ್ಲಿಡಬೇಕೆಂದು ತಿಳಿಯದೇ ವಿಚಿತ್ರವಾದ ಸ್ಥಳದಲ್ಲಿ ಇರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ.
ತಾಯಿ ಕ್ರಿಸ್ಮಸ್ ಗಿಡವನ್ನ ಸೂಕ್ತವಾದ ಸ್ಥಳದಲ್ಲಿ ಇರಿಸು ಎಂದು ಹೇಳುತ್ತಿದ್ದಂತೆಯೇ ಕ್ಯಾಲಮ್ ಪೆರ್ರಿನ್ ಅದನ್ನ ಎಲ್ಲಿಡಬೇಕೆಂದು ಚಿಂತೆ ಮಾಡಿದ್ದಾರೆ, ಬಳಿಕ ತಾಯಿಗೆ ಕ್ರಿಸ್ಮಸ್ ಗಿಡದ ಮೂಲಕ ತಮಾಷೆ ಮಾಡಬೇಕೆಂದು ನಿರ್ಧರಿಸಿದ ಕ್ಯಾಲಮ್ ಗೋಡೆಯ ಮೇಲೆ 90 ಡಿಗ್ರಿ ಆಕಾರದಲ್ಲಿ ಕೂರಿಸಿದ್ದಾರೆ.
ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.