alex Certify ಗುರುಂಗಾವ್​​ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದ ಆರೋಗ್ಯ ಸಿಬ್ಬಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುರುಂಗಾವ್​​ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದ ಆರೋಗ್ಯ ಸಿಬ್ಬಂದಿ ಸಾವು

ಗುರುಗಾಂವ್​​ನ 56 ವರ್ಷದ ಆರೋಗ್ಯ ಸಿಬ್ಬಂದಿ ಕೋವಿಶೀಲ್ಡ್​ ಲಸಿಕೆ ಪಡೆದ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಲಸಿಕೆ ಪಡೆದಿದ್ದ ಅವರು ಒಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ. ಈ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮಹಿಳೆಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ರಾಜವಂತಿ ಇಂದು ಬೆಳಗ್ಗೆ ನಿದ್ದೆಯಿಂದ ಏಳಲೇ ಇಲ್ಲ. ಹೀಗಾಗಿ ಅವರನ್ನ ಮೇದಾಂತಾ ಆಸ್ಪತ್ರೆಗೆ ತೆಗೆದುಕೊಂಡು ಹೋದೆವು. ಈ ವೇಳೆ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ರು ಅಂತಾ ಕುಟುಂಬಸ್ಥರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆ ಬಳಿಕವೇ ರಾಜವಂತಿ ಸಾವಿಗೆ ಅಸಲಿ ಕಾರಣ ತಿಳಿದು ಬರಲಿದೆ. ಅಲ್ಲಿಯವರೆಗೆ ರಾಜವಂತಿ ಲಸಿಕೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲು ಆಗೋದಿಲ್ಲ ಎಂದು ಗುರುಗಾಂವ್​ ಮುಖ್ಯ ಮೆಡಿಕಲ್​ ಆಫೀಸರ್​ ಡಾ. ವಿರೇಂದ್ರ ಯಾದವ್​ ಹೇಳಿದ್ದಾರೆ .

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...