ಕೋವಿಡ್-19 ಸೋಂಕಿಗೆ ತುತ್ತಾಗಿದ್ದ 14 ವರ್ಷದ ಗುಜರಾತ್‌ನ ಬಾಲಕನೊಬ್ಬ ಬಹು ಅಂಗಾಂಗ ವೈಫಲ್ಯದಿಂದ ಸೂರತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ತಾಪಿ ಜಿಲ್ಲೆಯ ಉಛಾಲ್ ಮೂಲದವನಾದ ಈ ಬಾಲಕ ಸೂರತ್‌ನ ಡೈಮಂಡ್ ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ.
ಏಪ್ರಿಲ್ 12ರಂದು ಸಚಿವಾಲಯದಲ್ಲಿ ಕೆಲಸ ಮಾಡುತ್ತಿದ್ದ ಚಿರಾಗ್ ಸೋಲಂಕಿ ಎಂಬ ಉಪವಿಭಾಗಾಧಿಕಾರಿಯೊಬ್ಬರು ಸೋಂಕಿಗೆ ಮೃತಪಟ್ಟಿದ್ದರು. ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. ಜುನಾಗಢದ ಗ್ರಾಮೀಣ ಪ್ರದೇಶ ರೈತ ಕುಟುಂಬದ ಸೋಲಂಕಿ ಕಳೆದ ವರ್ಷವಷ್ಟೇ ಸರ್ಕಾರೀ ನೌಕರಿ ಗಿಟ್ಟಿಸಿಕೊಂಡಿದ್ದರು. ಆರೋಗ್ಯವಂತ ಯುವಕನಾಗಿದ್ದರೂ ಕೋವಿಡ್-19ನಿಂದ ಅವರ ದೇಹ ದುರ್ಬಲಗೊಂಡು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗೆಳೆಯನನ್ನು ವಿವಾಹವಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವತಿ
ಬುಧವಾರದಂದು ಕೋವಿಡ್-19 ಪ್ರಕರಣಗಳಲ್ಲಿ ದೊಡ್ಡ ಏರಿಕೆ ಕಂಡ ಗುಜರಾತ್‌ನಲ್ಲಿ ಆ ದಿನದಂದೇ 7,410 ಹೊಸ ಕೇಸುಗಳು ದಾಖಲಾಗಿದ್ದು, 73 ಮಂದಿ ಮೃತಪಟ್ಟಿದ್ದಾರೆ. ಕಳೆದ 14 ದಿನಗಳಲ್ಲಿ ಗುಜರಾತ್‌ನಲ್ಲಿ 476 ಮಂದಿ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಕೋವಿಡ್-19ಗೆ ಬಲಿಯಾದ ಮಂದಿಯ ಪೈಕಿ 45 ವರ್ಷ ವಯಸ್ಸಿನೊಳಗಿನವರ ಪ್ರಮಾಣ 15-17 %ಗೆ ಏಪ್ರಿಲ್ ತಿಂಗಳಲ್ಲಿ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈ ಪ್ರಮಾಣವು ಕಳೆದ ಮಾರ್ಚ್‌ನಲ್ಲಿ 9.5%ರಲ್ಲಿ ಇತ್ತು.
ಕೋವಿಡ್ ಕಾರಣದಿಂದ ಮೃತಪಟ್ಟವರ ಪೈಕಿ ಅತಿ ದೊಡ್ಡ ಪಾಲು ಈಗಲೂ ಸಹ 60-79ರ ವಯೋಮಾನದವರದ್ದೇ ಆಗಿದ್ದು, 55% ಪಾಲು ಇವರದ್ದಾಗಿದೆ.