ಸೂರತ್ನಲ್ಲಿ 21 ವರ್ಷದ ವಿವಾಹಿತೆಯ ನಿಗೂಢ ಸಾವಿನ ಪ್ರಕರಣವನ್ನ ಅಪರಾಧ ವಿಭಾಗದ ಪೊಲೀಸರು ಭೇದಿಸಿದ್ದು ಆಕೆಯ ಪತಿಯೇ ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಅನುಜ್ ಅಲಿಯಾಸ್ ಮೋನು ಎಂಬವರ ಪತ್ನಿ ಶಾಲಿನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಆದರೆ ಪ್ರಕರಣದ ತನಿಖೆ ಬಳಿಕ ಪತ್ನಿಯ ಹೆಸರಿನಲ್ಲಿದ್ದ 63 ಲಕ್ಷ ರೂಪಾಯಿ ವಿಮಾ ಹಣವನ್ನ ಪಡೆಯಲಿಕ್ಕಾಗಿ ಆಕೆಯೇ ಪತಿಯೇ ಈ ಕೆಲಸ ಮಾಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಅನುಜ್ ಹಾಗೂ ಮೊಹಮ್ಮದ್ ನಯೀಮ್ ಅಲಿಯಾಸ್ ಪಪ್ಪು ಉಸ್ಮಾನ್ ಇಸ್ಮಾಯಿಲ್ ಸೇರಿ ಮೊದಲು ಆಕೆಯ ಕತ್ತನ್ನ ಹಿಸುಕಿದ್ದಾರೆ. ಆಕೆಗೆ ಪ್ರಜ್ಞೆ ತಪ್ಪಿದ ಬಳಿಕ ಆಕೆಯ ದೇಹವನ್ನ ರಸ್ತೆ ಬದಿಯಲ್ಲೇ ಇಟ್ಟುಕ್ಕೊಂಡು ಜನವರಿ 8ರ ಬೆಳಗ್ಗೆ 5.30ರ ಸುಮಾರಿಗೆ ಟ್ರಕ್ನ ಚಕ್ರದ ಕೆಳಗೆ ಆಕೆಯ ತಲೆ ಸಿಗುವಂತೆ ಮಾಡಿ ರಸ್ತೆ ಅಪಘಾತವೆಂಬಂತೆ ಬಿಂಬಿಸಿದ್ದರು.
ಮರಳು ಸರಬರಾಜು ಮಾಡಲು ಬೇಕು ಎಂದು ಕಾರಣ ನೀಡಿ ಪಾಲ್ ಪ್ರದೇಶದಿಂದ ಟ್ರಕ್ ಬಾಡಿಗೆ ಪಡೆದಿದ್ದ ಆರೋಪಿಗಳು ಅದರ ಸಹಾಯದಿಂದ ಶಾಲಿನಿಯನ್ನ ಕೊಲೆ ಮಾಡಿದ್ದಾರೆ. ಬಳಿಕ ಇದನ್ನ ಸಹಜ ಸಾವು ಎಂದು ಹೇಳುವ ಮೂಲಕ ಪತಿ ಎಲ್ಲರನ್ನ ನಂಬಿಸಿದ್ದ. ಆದರೆ ಶಾಲಿನಿ ತಂದೆ ನೀಡಿದ ದೂರನ್ನ ಆಧರಿಸಿ ತನಿಖೆ ನಡೆಸಿದ ಪೊಲೀಸರು ಶಾಲಿನಿ ಸಾವಿನ ಹಿಂದಿನ ಅಸಲಿ ಸತ್ಯವನ್ನ ಬಯಲಿಗೆಳೆದಿದ್ದಾರೆ.