alex Certify ಗಂಡನೊಂದಿಗೆ ಸರಸಕ್ಕೆ ಅವಕಾಶ ಕೊಡದ ಮಾವನಿಂದ ಸೊಸೆಗೆ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಡನೊಂದಿಗೆ ಸರಸಕ್ಕೆ ಅವಕಾಶ ಕೊಡದ ಮಾವನಿಂದ ಸೊಸೆಗೆ ಕಿರುಕುಳ

ಅಹಮದಾಬಾದ್: ಗಂಡನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡದ ಮಾವ ಸೊಸೆಗೆ ಕಿರುಕುಳ ನೀಡಿದ್ದಾನೆ. ಆಕೆಯ ಮೈಯಲ್ಲಿ ದೆವ್ವ ಸೇರಿಕೊಂಡಿದ್ದು ಅದು ಮಗನ ದೇಹವನ್ನು ಪ್ರವೇಶಿಸುತ್ತದೆ ಎಂದು ನಂಬಿಸಿ ಕಿರುಕುಳ ನೀಡಿದ್ದಾನೆ. ಇದಕ್ಕೆ ಮಹಿಳೆ ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಲಾಗಿದೆ.

ವಡೋದರಾ ನಿವಾಸಿಯಾಗಿರುವ ಮಹಿಳೆ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಗೆ ದೆವ್ವ ಹಿಡಿದಿದೆ ಎಂದು ಮಾವ ಪತಿಯೊಂದಿಗೆ ಸರಸಕ್ಕೆ ಅವಕಾಶವನ್ನೇ ನೀಡಿಲ್ಲ. ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ವಡೋದರಾ ಅಲ್ಕಪುರಿ ಮೂಲದ ಮಹಿಳೆ ಗಾಂಧಿನಗರ ನಿವಾಸಿಯೊಂದಿಗೆ ಮದುವೆಯಾಗಿದ್ದು, ಪತಿಯ ಮನೆಯಲ್ಲಿ ವಾಸವಾಗಿದ್ದಾರೆ. ಆಕೆಯ ಮಾವ ಸೊಸೆಗೆ ದೆವ್ವ ಹಿಡಿದಿದೆ ಎಂದು ಸುಳ್ಳು ಹೇಳಿ ಮಗನೊಂದಿಗೆ ಸೇರಲು ಸೇರುವುದನ್ನು ತಡೆದಿದ್ದಾರೆ. ಇದಕ್ಕೆ ಅತ್ತೆ ಕೂಡ ಸಾಥ್ ನೀಡಿದ್ದು ಸೊಸೆಗೆ ಲೈಂಗಿಕ ಕಿರುಕುಳ ನೀಡುವಂತೆ ಮಾವನನ್ನು ಪ್ರಚೋದಿಸುತ್ತಿದ್ದಾಳೆ ಎಂದು ಮಹಿಳೆ ದೂರು ನೀಡಿದ್ದಾಳೆ. ಹಿರಿಯರು ಪಂಚಾಯಿತಿ ನಡೆಸಿದರೂ ಮನೆಯಿಂದ ಹೊರ ಹಾಕಿದ್ದು ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...