ನಮ್ಮ ಸುತ್ತಲೂ ಎಂತೆಂಥದ್ದೋ ವಿಚಿತ್ರ ಘಟನೆಗಳು ನಡೆಯುತ್ತಲೇ ಇದ್ದರೂ ಸಹ ಕೆಲವೊಮ್ಮೆ ವಿಪರೀತ ಎನ್ನುವಂತಹ ವಿದ್ಯಾಮಾಣಗಳು ನಡೆಯುತ್ತವೆ.
ಗುಜರಾತ್ನ ಸರ್ಕಾರಿ ಅಧಿಕಾರಿಯೊಬ್ಬ ತನ್ನನ್ನು ತಾನು ’ಕಲ್ಕಿ’ ಎಂದು ಕರೆದುಕೊಂಡಿದ್ದು, ತಾನು ವಿಷ್ಣುವಿನ ಹತ್ತನೇ ಅವತಾರವೆಂದು ಹೇಳಿಕೊಂಡಿರುವುದಲ್ಲದೇ, ತಪಸ್ಸು ಮಾಡುತ್ತಿರುವ ಕಾರಣ ಕಚೇರಿಗೆ ಬರಲು ಆಗುವುದಿಲ್ಲವೆಂದು ಹೇಳುತ್ತಿದ್ದಾನೆ.
ತನ್ನ ತಪಸ್ಸಿನ ಕಾರಣದಿಂದಲೇ ದೇಶದಲ್ಲಿ ಮಳೆಯಾಗುತ್ತಿದೆ ಎಂದಿರುವ ಈತನ ಹೆಸರು ರಮೇಶ್ಚಂದ್ರ. ಈ ವ್ಯಕ್ತಿ ಸರ್ದಾರ್ ಸರೋವರ ಪುನರ್ವಸತಿ ಏಜೆನ್ಸಿಯಲ್ಲಿ ಮೇಲುಸ್ತುವಾರಿ ಅಭಿಯಂತರರ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನ ವಿರುದ್ಧ ಇತ್ತೀಚೆಗೆ ತಾನೇ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ.
ಸಾಗರೋತ್ತರ ಪ್ರವಾಸದ ಬಗ್ಗೆ ಮಹತ್ವದ ಹೇಳಿಕೆ ನೀಡಿದ WHO
“ನಾನೀಗ ನನ್ನ ಮನೆಯಲ್ಲೇ ತಪಸ್ಸು ಮಾಡುತ್ತಿದ್ದು, ಐದನೇ ಆಯಾಮಕ್ಕೆ ಪ್ರವೇಶಿಸಿ ಜಾಗತಿಕ ಮನೋಬಲ ಹೆಚ್ಚಿಸಲು ಯತ್ನಿಸುತ್ತಿರುವೆ. ಕಚೇರಿಯಲ್ಲಿ ಕುಳಿತು ನಾನು ಇಂಥ ತಪಸ್ಸು ಮಾಡಲಾರೆ” ಎಂದು 50ರ ವಯೋಮಾನದಲ್ಲಿರುವ ಈತ ಶೋಕಾಸ್ ನೊಟೀಸ್ಗೆ ಪ್ರತಿಕ್ರಿಯೆ ಕೊಡುವ ವೇಳೆ ಹೇಳಿಕೊಂಡಿದ್ದಾನೆ.
ತನ್ನ ತಪಸ್ಸಿನ ಕಾರಣದಿಂದಲೇ ಕಳೆದ 19 ವರ್ಷಗಳಿಂದ ಭಾರತದಲ್ಲಿ ಒಳ್ಳೆ ಮಳೆಯಾಗುತ್ತಿದೆ ಎನ್ನುವ ಈತ, “ಕಚೇರಿಯಲ್ಲಿ ಕುಳಿತು ಸುಮ್ಮನೇ ಕಾಲಹರಣ ಮಾಡುವುದು ಮುಖ್ಯವೋ ಅಥವಾ ದೇಶವನ್ನು ಬರದಿಂದ ಉಳಿಸಲು ಘನಂದಾರಿ ಕೆಲಸ ಮಾಡುವುದು ಮುಖ್ಯವೋ ನನ್ನ ಹಿರಿಯ ಅಧಿಕಾರಿಗಳು ನಿರ್ಧರಿಸಬೇಕು. ನಾನು ಕಲ್ಕಿಯ ಅವತಾರವಾದ ಕಾರಣ ಭಾರತದಲ್ಲಿ ಮಳೆಯಾಗುತ್ತಿದೆ” ಎಂಬ ಅಣಿಮುತ್ತುಗಳನ್ನು ಉದುರಿಸಿದ್ದಾನೆ.