ಮೂವರು ಯುವತಿಯರು ಸೇರಿದಂತೆ ಆರು ಮಂದಿಯ ಗುಂಪೊಂದು ನಡೆಸಿದ ’ಹನಿ ಟ್ರ್ಯಾಪ್’ಗೆ ಬಿದ್ದ ಗುಜರಾತ್ನ ವೈದ್ಯರೊಬ್ಬರು 1.25 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.
ಇಲ್ಲಿನ ಖೇಡಾ ಜಿಲ್ಲೆಯ ನಡಿಯಾದ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡುವ 49 ವರ್ಷದ ವೈದ್ಯರೊಬ್ಬರು ಈ ಟ್ರ್ಯಾಪ್ಗೆ ಬಿದ್ದಿದ್ದಾರೆ.
ಪ್ರಫುಲ್ಲಾ ದರ್ಜಿ ಎಂಬಾಕೆಯ ಪತಿಗೆ ಕೆಲ ವರ್ಷಗಳ ಹಿಂದೆ ಚಿಕಿತ್ಸೆ ಕೊಟ್ಟಿದ್ದಾಗಿ ಹೇಳಿದ ವೈದ್ಯರು, ಇದೇ ದರ್ಜಿ ಮತ್ತೊಮ್ಮೆ ಕರೆ ಮಾಡಿ ಮತ್ತೊಬ್ಬ ರೋಗಿಯನ್ನು ಭೇಟಿಯಾಗಲು ಕೋರಿದಾಗ ಅಲ್ಲಿಗೆ ಹೋಗಿದ್ದಾಗಿ ತಿಳಿಸಿದ್ದಾರೆ. ಆನಂದ್ನಲ್ಲಿರುವ ತನ್ನ ಮನೆಗೆ ವೈದ್ಯರನ್ನು ಕರೆದೊಯ್ದಿದ್ದಾಳೆ ದರ್ಜಿ. ಅಲ್ಲಿ ಆಕೆಯ ಸಹಚರಣಿ ವೈದ್ಯರ ಮುಂದೆ ಬಟ್ಟೆ ಬಿಚ್ಚಿ ಬೆತ್ತಲಾಗಿದ್ದಾಳೆ.
ಇದಾದ ಕೆಲ ಹೊತ್ತಿನ ಬಳಿಕ ಅಲ್ಲಿಗೆ ಬಂದ ಮೂವರು ಪುರುಷರು ತಾವು ಪೊಲೀಸ್ ಸಿಬ್ಬಂದಿ ಎಂದು ಹೇಳಿಕೊಂಡು, ಆತನಿಗೂ ಬೆತ್ತಲಾಗಲು ಬಲವಂತ ಮಾಡಿ ಆತನ ಹಾಗೂ ಆ ಹೆಂಗಸು ಜೊತೆಯಾಗಿರುವ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಇದಾದ ಮೇಲೆ ವೈದ್ಯರನ್ನು ಬ್ಲಾಕ್ ಮೇಲ್ ಮಾಡಿದ ತಂಡ ಅವರಿಂದ 1.25 ಲಕ್ಷ ರೂ.ಗಳನ್ನು ಕಿತ್ತಿದೆ.
ಇದೇ ಘಟನೆಯನ್ನು ಇಟ್ಟುಕೊಂಡು ಇನ್ನೊಮ್ಮೆ ಬ್ಲಾಕ್ಮೇಲ್ ಮಾಡಿ ಇನ್ನಷ್ಟು ದುಡ್ಡ ಕೀಳಲು ಮುಂದಾದ ತಂಡದ ವಿರುದ್ಧ ವೈದ್ಯರು ಪೊಲೀಸ್ ದೂರು ನೀಡಿದ್ದಾರೆ. ಆಪಾದಿತರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.