ಸೂರತ್: ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ ಪ್ರಿಯಕರ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸೂರತ್ ಜಿಲ್ಲೆಯ ವರಿಯಾವ್ ನಲ್ಲಿ 24 ವರ್ಷದ ಇಕ್ರಂ ಫ್ಯಾನ್ಸಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಯುವತಿಯನ್ನು ಪರಿಚಯಿಸಿಕೊಂಡಿದ್ದಾನೆ. ಇಬ್ಬರ ನಡುವೆ ಗೆಳೆತನವಾಗಿ ಪ್ರೀತಿಸಿದ್ದು ಎರಡು ಕುಟುಂಬದವರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ನಂತರದಲ್ಲಿ ಆಕೆಯನ್ನು ಹೋಟೆಲ್ ಗೆ ಕರೆದೊಯ್ಯುತ್ತಿದ್ದ ಇಕ್ರಂ ಲೈಂಗಿಕ ಸಂಬಂಧ ಬೆಳೆಸುತ್ತಿದ್ದ. ಇತ್ತೀಚೆಗೆ ಆಕೆಯಿಂದ ದೂರವಾಗಲು ಯತ್ನಿಸುತ್ತಿದ್ದ. ಆತನ ಕುಟುಂಬದವರು ಹುಡುಗಿಯ ಪೋಷಕರಿಗೆ ನಿಮ್ಮ ಮಗಳನ್ನು ಮದುವೆಯಾಗಲು ಪುತ್ರ ಒಲವು ತೋರುತ್ತಿಲ್ಲ ಎಂದು ಹೇಳಿದ್ದಾರೆ.
ಇಕ್ರಂ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಜಹಂಗೀರ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.