ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತರಲು ಮುಂದಾಗಿರುವ ಕೃಷಿ ಕ್ಷೇತ್ರ ಸಂಬಂಧಿ ಸುಧಾರಣೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ದೆಹಲಿ ತಲುಪುತ್ತಿವೆ. ಈ ಪ್ರತಿಭಟನೆ ದೆಹಲಿ ತಲುಪದಂತೆ ನೋಡಿಕೊಳ್ಳಲು ಉತ್ತರ ಭಾರತದ ಅನೇಕ ರಾಜ್ಯಗಳ ಪೊಲೀಸರು ಭಾರೀ ಪ್ರಯತ್ನ ಮಾಡುತ್ತಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ಮೀರತ್‌ನಲ್ಲಿ ರೈತರ ಪ್ರತಿಭಟನೆಯಿಂದ ರಸ್ತೆ ಬ್ಲಾಕ್ ಆಗಿದ್ದ ಕಾರಣ ಮದುವೆ ದಿಬ್ಬಣದ ಕಾರ್‌ನಲ್ಲಿ ಹೊರಟಿದ್ದ ಮದುಮಗರೊಬ್ಬರು ಕಾಲ್ನಡಿಗೆಯಲ್ಲೇ ಛತ್ರ ತಲುಪಬೇಕಾಗಿ ಬಂದಿದೆ.
ಬರೀ ವರ ಮಾತ್ರವಲ್ಲದೇ ಆತನ ಹಿಂದೆ ಇದ್ದ ಪಟಾಲಮ್ಮೆಲ್ಲವೂ ರಸ್ತೆಯಲ್ಲಿ ನಡೆದುಕೊಂಡೇ ಹೋಗಬೇಕಾಗಿ ಬಂದಿದೆ.
ಹರಿಯಾಣದಲ್ಲಿ ನಡೆದ ಇಂಥದ್ದೇ ಘಟನೆಯೊಂದರಲ್ಲಿ, ರೈತರ ಪ್ರತಿಭಟನೆಯಿಂದಾಗಿ ರಸ್ತೆಯನ್ನು ಬ್ಲಾಕ್ ಮಾಡಿದ್ದ ಕಾರಣದಿಂದಾಗಿ ಮದುಮಗ ತನ್ನ ಕಾರು ಬರಲು ಗಂಟೆಗಳ ಮಟ್ಟಿಗೆ ಕಾಯಬೇಕಾಗಿ ಬಂದಿತ್ತು.