ನವದೆಹಲಿ: ಗ್ರಾಮೀಣ ಡಾಕ್ ಸೇವಕ(ಜಿಡಿಎಸ್) ನೇಮಕಾತಿ ಮೂರನೇ ಸುತ್ತಿನ ಪ್ರಕ್ರಿಯೆ ಆರಂಭವಾಗಿದೆ. ಮೊದಲ ಹಂತದಲ್ಲಿ ಒಡಿಶಾ ಮತ್ತು ತಮಿಳುನಾಡು ಅಂಚೆ ವಲಯದಲ್ಲಿ 5000ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಭಾರತೀಯ ಅಂಚೆ ಇಲಾಖೆ ತಿಳಿಸಿದೆ.
ನೊಂದಣಿ ಪ್ರಕ್ರಿಯೆ ಎಲ್ಲವೂ ಹಿಂದಿನ ನೇಮಕಾತಿಯಂತೆಯೇ ಇರಲಿದೆ. ಸೆಪ್ಟೆಂಬರ್ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ ಎಂದು ಹೇಳಲಾಗಿದೆ.
10 ನೇ ತರಗತಿಯಲ್ಲಿ ಉತ್ತೀರ್ಣರಾದವರು, ಗಣಿತ, ಸ್ಥಳೀಯ ಭಾಷೆ ಮತ್ತು ಇಂಗ್ಲೀಷ್ ನಲ್ಲಿ ಉತ್ತಿರ್ಣ ಅಂಕಗಳನ್ನು ಪಡೆದಿರಬೇಕು. ಒಡಿಶಾ ಮತ್ತು ತಮಿಳುನಾಡಿನ ಅರ್ಜಿದಾರರು ಒಡಿಯಾ ಮತ್ತು ತಮಿಳು ಭಾಷೆ ಬಲ್ಲವರಾಗಿರಬೇಕು. ಹೆಚ್ಚುವರಿಯಾಗಿ ಅಭ್ಯರ್ಥಿಗಳು ಕನಿಷ್ಠ 60 ದಿನಗಳ ಅವಧಿಯ ಬೇಸಿಕ್ ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ ಹೊಂದಿರಬೇಕು. ಸೈಕ್ಲಿಂಗ್ ಕಲಿತಿರಬೇಕು. ಸೈಕ್ಲಿಂಗ್ ಕಲಿತಿರುವುದು ಜಿಡಿಎಸ್ ಹುದ್ದೆಗಳಿಗೆ ಪೂರ್ವಭಾವಿ ಅವಶ್ಯಕತೆಯಾಗಿದೆ. ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಸವಾರಿ ಮಾಡುವುದನ್ನು ಕಲಿತಿದ್ದರೆ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.