ಹಿಂಸಾಚಾರವನ್ನ ಪ್ರಚೋದಿಸುವಂತವ ಹಾಗೂ ನಕಲಿ ಸುದ್ದಿಗಳನ್ನ ಹರಡಿ ದೇಶದ ಶಾಂತಿಗೆ ಭಂಗ ತರುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನ ದುರುಪಯೋಗಪಡಿಸಿಕೊಂಡರೆ ಅಂಥವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ.
ಭಾರತದಲ್ಲಿ ಯಾವುದೇ ವಿಚಾರದ ಬಗ್ಗೆ ಆರೋಗ್ಯಕರ ಚರ್ಚೆ ನಡೆಸಲು ಸಂವಿಧಾನದಲ್ಲೇ ಅವಕಾಶ ನೀಡಲಾಗಿದೆ. ಆದರೆ ಟ್ವಿಟರ್, ಫೇಸ್ಬುಕ್, ಲಿಂಕ್ಡ್ ಇನ್ ಅಥವಾ ವಾಟ್ಸಾಪ್ ಹೀಗೆ ಸಾಮಾಜಿಲ ಜಾಲತಾಣದಲ್ಲಿ ನಕಲಿ ಸುದ್ದಿಗಳನ್ನ ಹಬ್ಬಿಸಿದ್ರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತೆ.
ನೀವು ನಮ್ಮ ದೇಶಕ್ಕಾಗಿಯೇ ಕೆಲಸ ಮಾಡುತ್ತಿರಬಹುದು. ಕೋಟ್ಯಂತರ ಅನುಯಾಯಿಗಳನ್ನೂ ನೀವು ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹೊಂದಿರಬಹುದು. ಆದರೆ ಇವೆಲ್ಲದರ ನಡುವೆ ಸರ್ಕಾರದ ಕಾನೂನು ಹಾಗೂ ಭಾರತದ ಸಂವಿಧಾನವನ್ನ ನೀವು ಗೌರವಿಸಲೇಬೇಕು ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ರೈತ ಪ್ರತಿಭಟನೆ ವಿಚಾರದಲ್ಲಿ ನಕಲಿ ಸುದ್ದಿಗಳನ್ನ ಹಬ್ಬಿಸಿದ ಟ್ವಿಟರ್ ಖಾತೆಗಳನ್ನ ಬ್ಯಾನ್ ಮಾಡಿದ ವಿಚಾರವಾಗಿ ಮಾತನಾಡುತ್ತಾ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಈ ಎಚ್ಚರಿಕೆಯನ್ನ ನೀಡಿದ್ದಾರೆ.