ಸದ್ಯ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರೋ ಭಾರತ ಇದೀಗ ಬೇರೆ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗದಂತೆ ತಡೆಯಲು ಹೊಸ ಕ್ರಮ ಕೈಗೊಂಡಿದೆ. ಇದರನ್ವಯ ಕೇಂದ್ರ ಆರೋಗ್ಯ ಸಚಿವಾಲಯ ಡೆಂಗ್ಯೂ, ಮಲೇರಿಯಾ, ಚಿಕೂನ್ ಗೂನ್ಯಾ ಸೇರಿದಂತೆ ವಿವಿಧ ಹಳೆಯ ಸಾಂಕ್ರಾಮಿಕ ರೋಗಗಳ ಚಿಕಿತ್ಸೆಗೆ ಮಾರ್ಗಸೂಚಿ ಪ್ರಕಟಿಸಿದೆ.
ಈಗಾಗಲೇ ಕೊರೊನಾ ವೈರಸ್ ನಿಂದ ಜನರು ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಳೆಯ ಯಾವುದೇ ಸಾಂಕ್ರಾಮಿಕ ಕಾಯಿಲೆ ಹೆಚ್ಚಾದರೆ ಕಷ್ಟ ಅಂತಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಹೀಗಾಗಿ ಜ್ವರ, ಕೆಮ್ಮು, ಆಯಾಸ, ತಲೆನೋವು, ವಾಂತಿ ಸೇರಿದಂತೆ ಈ ತರಹದ ಯಾವುದೇ ಲಕ್ಷಣಗಳು ಕಂಡುಬಂದರೂ ಸಹ ಕೂಡಲೇ ವೈದ್ಯರನ್ನ ಕಾಣುವಂತೆ ಸೂಚನೆ ನೀಡಿದೆ.
ಪ್ರತಿ ವರ್ಷ ಈ ಸಮಯದಲ್ಲಿ ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯಾದಂತ ಕಾಯಿಲೆಗಳು ಜನರನ್ನ ಬಾಧಿಸುತ್ತಿತ್ತು. ಆದರೆ ಈ ಬಾರಿ ಕೊರೊನಾ ಕೂಡ ಈ ಸಾಲಿಗೆ ಸೇರಿಕೊಂಡಿದೆ. ಹೀಗಾಗಿ ಕೊರೊನಾ ಸೋಂಕಿತನಿಗೆ ಇನ್ನೊಂದು ಸಾಂಕ್ರಾಮಿಕ ರೋಗ ಕಾಣಿಸಿಕೊಂಡರೆ ಅದು ಪ್ರಾಣಕ್ಕೆ ಸಂಚಕಾರ ತರಬಲ್ಲದು. ಆದ್ದರಿಂದ ಮಾರ್ಗಸೂಚಿ ಪಾಲನೆ ಮಾಡುವಂತೆ ಹೇಳಿದೆ.