alex Certify ʼಸೋಲಾರ್​ ವಿದ್ಯುತ್ʼ​ ಬಳಕೆದಾರರಿಗೆ ಭರ್ಜರಿ ಆಫರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸೋಲಾರ್​ ವಿದ್ಯುತ್ʼ​ ಬಳಕೆದಾರರಿಗೆ ಭರ್ಜರಿ ಆಫರ್​

ನೀವೇನಾದರೂ ಉತ್ತರ ಪ್ರದೇಶದ ನಿವಾಸಿಯಾಗಿದ್ದರೆ ನಿಮಗೆ ಸೋಲಾರ್​​ ಪ್ಲಾಂಟ್​​ಗಳನ್ನ ಮನೆಗೆ ಅಳವಡಿಸೋದು ಬಹಳ ಸುಲಭವಾಗಲಿದೆ.

ವಾಸ್ತವವಾಗಿ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರದ ಗ್ರಿಡ್​​ ಸಂಪರ್ಕಿತ ಮೇಲ್ಚಾವಣಿಯ ಸೌರ ವಿದ್ಯುತ್​ ಸ್ಥಾವರ ಯೋಜನೆ ಹಾಗೂ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ನೆಡಾ) ಹಾಗೂ ಉತ್ತರ ಪ್ರದೇಶ ವಿದ್ಯುತ್​ ನಿಗಮದ ಸಹಯೋಗದೊಂದಿಗೆ ಈ ಯೋಜನೆಯನ್ನ ನಡೆಸುತ್ತಿದೆ. ಈ ಯೋಜನೆಯಡಿಯಲ್ಲಿ ಗ್ರಾಹಕರಿಗೆ ಸಹಾಯ ಧನ ಸಿಗಲಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮಧ್ಯಾಂಚಲ್​ ವಿದ್ಯಾ ವಿತ್ರಾನ್​ ನಿಗಮ ವ್ಯವಸ್ಥಾಪಕ ನಿರ್ದೇಶಕ ಸೂರ್ಯಪಾಲ್​ ಗಂಗ್ವಾರ್, ಈ ಯೋಜನೆಯಡಿಯಲ್ಲಿ 19 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನೆಯ ಗುರಿ ಹೊಂದಿದ್ದೇವೆ, ಈಗಾಗಲೇ 7.75 ಮೆಗಾವ್ಯಾಟ್​ ಮೈಲಿಗಲನ್ನ ತಲುಪಿದ್ದೇವೆ, ಉತ್ತರ ಪ್ರದೇಶದಲ್ಲಿ ಸೋಲಾರ್​ ವಿದ್ಯುತ್​ ಸಂಪರ್ಕ ಬೇಕಾದವರು http://apps.uppcl.org/solar ಲಿಂಕ್​ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...