![](https://kannadadunia.com/wp-content/uploads/2019/11/tik-tok_5ddf7f41995bc.jpg)
ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ಮೂಲದ ಟಿಕ್ ಟಾಕ್ ಆಪ್ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ ನಂತರದಲ್ಲಿ ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು, ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.
![](https://kannadadunia.com/wp-content/uploads/2020/06/china-apps-ban.jpg)