ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ಮೂಲದ ಟಿಕ್ ಟಾಕ್ ಆಪ್ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ ನಂತರದಲ್ಲಿ ಚೀನಾಗೆ ಸರಿಯಾಗೇ ಬಿಸಿಮುಟ್ಟಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮತ್ತೊಂದು ಕ್ರಮ ಕೈಗೊಂಡಿದ್ದು, ಟಿಕ್ ಟಾಕ್ ಸೇರಿದಂತೆ 59 ಚೀನಾ ಅಪ್ ಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಟಿಕ್ ಟಾಕ್ ಜೊತೆಗೆ ಶೇರ್ ಇಟ್, ಯುಸಿ ಬ್ರೌಸರ್, ಯು ಕ್ಯಾನ್, ಹೆಲೋ, ವಿಡಿಯೋ ಕಾಲ್, ಡಿಯು ಕ್ಲೀನರ್, ಡಿಯು ಬ್ರೌಸರ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವಿಡ್ಮೇಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್ಲೇಟ್, ವಿಮೇಟ್, ಯೂಟ್ಯೂಬ್ ಇಂಟರ್ನ್ಯಾಷನಲ್, ಯೂಟ್ಯೂಬ್ ಸೆಕ್ಯೂರಿಟಿ, ಮೊಬೈಲ್ ಲೆಜೆಂಡ್ಸ್, ಕ್ಸೆಂಡರ್, ವೈರಸ್ ಕ್ಲೀನರ್, ಕಲ್ಬ್ ಫ್ಯಾಕ್ಟರಿ, ಕ್ಲೀನ್ ಮಾಸ್ಟರ್, ಪ್ಯಾರಲಲ್ ಸ್ಪೇಸ್ ಸೇರಿದಂತೆ 59 ಆಪ್ ಗಳನ್ನು ಬ್ಯಾನ್ ಮಾಡಲಾಗಿದೆ