ನವದೆಹಲಿ: ಭಾರತೀಯ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಪುಸ್ತಕ ಬರೆಯುವಂತೆ ಯುವ ಲೇಖಕರನ್ನು ಪ್ರೇರೇಪಿಸುವ ಹಾಗೂ ಮಾರ್ಗದರ್ಶನ ನೀಡುವ ಹೊಸ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ.
“ಸ್ಕೀಮ್ ಫಾರ್ ಮೆಂಟರಿಂಗ್ ಯಂಗ್ ಆಥರ್ಸ್, ಅಂಡರ್ ದ ಇಂಡಿಯಾ 75 ಪ್ರೊಜೆಕ್ಟ್” ಎಂಬ ಹೆಸರಿನ ಈ ಯೋಜನೆಯನ್ನು ಕೇಂದ್ರ ಶಿಕ್ಷಣ ಮಂತ್ರಾಲಯವು ನ್ಯಾಷನಲ್ ಬುಕ್ ಟ್ರಸ್ಟ್ (ಎನ್‌ಬಿಟಿ) ಮೂಲಕ ಜಾರಿಗೆ ತಂದಿದೆ.
ಮೊಬೈಲ್ ನಲ್ಲೇ ಸಿಗಲಿದೆ ಬಜೆಟ್ ಮಾಹಿತಿ: ರೈತರಿಗೂ ಸಿಹಿ ಸುದ್ದಿ
ಬರುವ ಆಗಸ್ಟ್ 15 ರಂದು ನಡೆಯುವ 75 ನೇ ಸ್ವಾತಂತ್ರ್ಯೋತ್ಸವದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಏಪ್ರಿಲ್ 1 ರಿಂದ ಮೊದಲ ಮಾರ್ಗದರ್ಶನ ಶಿಬಿರ ಪ್ರಾರಂಭವಾಗಲಿದ್ದು ಅದಕ್ಕಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.