ಇತ್ತೀಚಿನ ದಿನಗಳಲ್ಲಿ ವಿಮಾ ಪಾಲಿಸಿ ಮಾಡಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಸರ್ಕಾರ ವಿಮೆಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದು ಪಾಲಿಸಿದಾರರ ಸಮಸ್ಯೆಯನ್ನು ಕಡಿಮೆ ಮಾಡಲಿದೆ. ಹೊಸ ನಿಯಮಗಳ ಪ್ರಕಾರ, ಗ್ರಾಹಕರು ವಿಮಾ ಕಂಪನಿಗೆ ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌ನಲ್ಲಿ ನೀಡಬಹುದು.
ಇಷ್ಟೇ ಅಲ್ಲದೆ ದೂರುಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ವಿಮೆಗೆ ಸಂಬಂಧಿಸಿದ ದೂರುಗಳು ಮತ್ತು ನ್ಯಾಯಯುತ ಪರಿಹಾರಕ್ಕಾಗಿ ವಿಮಾ ಓಂಬುಡ್ಸ್ಮನ್ ನಿಯಮಗಳು 2017 ಗೆ ತಿದ್ದುಪಡಿ ಮಾಡಲು ಸರ್ಕಾರ ಸೂಚಿಸಿದೆ.
ವಿಮಾ ಕಂಪನಿ ಮತ್ತು ಪಾಲಿಸಿದಾರರ ನಡುವಿನ ವಿವಾದ ಸೇರಿದಂತೆ ಏಜೆಂಟರು ಮತ್ತು ಇತರ ಮಧ್ಯವರ್ತಿಗಳ ಬಗ್ಗೆಯೂ ದೂರು ಸಲ್ಲಿಸಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಹಿಂದೆ ವಿವಾದಕ್ಕೆ ಸಂಬಂಧಿಸಿ ದೂರುಗಳನ್ನು ಮಾತ್ರ ಸಲ್ಲಿಸಬೇಕಾಗಿತ್ತು. ಮಧ್ಯವರ್ತಿಗಳು ವಿಮಾ ಓಂಬುಡ್ಸ್ಮನ್ ವ್ಯಾಪ್ತಿಗೆ ಬರ್ತಿರಲಿಲ್ಲ.
ಪಾಲಿಸಿದಾರರು ದೂರುಗಳನ್ನು ವಿದ್ಯುನ್ಮಾನವಾಗಿ ಸಲ್ಲಿಸಬಹುದು. ದೂರುಗಳನ್ನು ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಇದಕ್ಕೆ ವಿಮಾ ಕಂಪನಿಗಳು ಕಂಪ್ಲೈಂಟ್ ಮ್ಯಾನೇಜ್ಮೆಂಟ್ ಸಿಸ್ಟಮ್ ರಚಿಸಬೇಕಾಗುತ್ತದೆ. ಇದರಿಂದಾಗಿ ಪಾಲಿಸಿದಾರರು ತಮ್ಮ ದೂರುಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.