ಗೋರಕ್ಪುರದ ಕ್ಯಾಂಪಿಯರ್ಗಂಜ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಎಂಟನೇ ತರಗತಿ ಓದುತ್ತಿರುವ ಹುಡುಗನ ಜೊತೆ ಮಹಿಳೆಯೊಬ್ಬಳು ಓಡಿ ಹೋಗಿದ್ದಾಳೆ. ಈ ಬಗ್ಗೆ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಈವರೆಗೂ ಮಹಿಳೆ ಮತ್ತು ಹುಡುಗ ಎಲ್ಲಿದ್ದಾರೆಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.
29 ವರ್ಷದ ಮಹಿಳೆ 15 ವರ್ಷದ ಹುಡುಗನ ಜೊತೆ ಬುಧವಾರ ಶಿವರಾತ್ರಿ ಜಾತ್ರೆಗೆ ಹೋಗಿದ್ದಳು. ಅಲ್ಲಿಂದ ಇಬ್ಬರೂ ಓಡಿ ಹೋಗಿದ್ದಾರೆ. ಇಬ್ಬರ ಮನೆಯವರೂ ಗುರುವಾರ ರಾತ್ರಿಯವರೆಗೆ ಕಾಯ್ದು, ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಇಬ್ಬರ ಮಧ್ಯೆ ಸಂಬಂಧವಿತ್ತಂತೆ. ಆದ್ರೆ ವಯಸ್ಸಿನ ಅಂತರವಿದ್ದ ಕಾರಣ ಗ್ರಾಮಸ್ಥರಿಗೆ ಅನುಮಾನ ಬಂದಿರಲಿಲ್ಲ.
ಬಾಲಕನ ಪಾಲಕರು, ಮಹಿಳೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ವಿಶೇಷವೆಂದ್ರೆ ಮಹಿಳೆಗೆ ಮದುವೆಯಾಗಿ ಮೂರು ಮಕ್ಕಳಿವೆ. ಕೆಲ ದಿನಗಳಿಂದ ಪತ್ನಿ ವರ್ತನೆ ಬದಲಾಗಿತ್ತು ಎಂದು ಮಹಿಳೆ ಪತಿ ಹೇಳಿದ್ದಾನೆ. ಆದ್ರೆ ಹೀಗೆ ಮಾಡ್ತಾಳೆಂಬುದು ನಮಗೆ ಗೊತ್ತಿರಲಿಲ್ಲವೆಂದು ಪತಿ ಹೇಳಿದ್ದಾನೆ.