ಆನ್ಲೈನ್ ಪ್ರೈವೆಸಿ ಎಂಬುದು ದಿನದಿಂದ ದಿನಕ್ಕೆ ಅತಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವ ಕಾರಣ, ದೊಡ್ಡ ಆನ್ಲೈನ್ ಸೇವಾದಾರರೆಲ್ಲ ಈ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಲು ಆರಂಭಿಸಿದ್ದಾರೆ.
ತನ್ನ ಸ್ಟ್ರೀಟ್ ವ್ಯೂ ಹಾಗೂ ನೇವಿಗೇಷನ್ ಫೀಚರ್ಗಳ ಮೂಲಕ ಯಾವುದೇ ನಗರದ ಬೀದಿಗಳನ್ನು ವರ್ಚುವಲ್ ಆಗಿ ಸುತ್ತುವಂತೆ ಮಾಡಿರುವ ಗೂಗಲ್ ಮ್ಯಾಪ್ಸ್, ಇದರಿಂದ ದೊಡ್ಡ ತಲೆನೋವೊಂದಕ್ಕೆ ಸಿಕ್ಕಿ ಹಾಕಿಕೊಂಡಿದೆ. ಸ್ಟ್ರೀಟ್ ವ್ಯೂನಲ್ಲಿ ಬೀದಿಗಳನ್ನು ನೋಡುವ ವೇಳೆ ಅಲ್ಲಿ ಕಾಣುವ ಖಾಸಗಿ ವ್ಯಕ್ತಿಗಳ ಚಿತ್ರಗಳು ಅವರ ಅನುಮತಿ ಇಲ್ಲದೆಯೇ ಕಾಣುತ್ತಿವೆ.
ಇದೀಗ ನಿಮ್ಮ ಮನೆಯು ಗೂಗಲ್ ಮ್ಯಾಪ್ನಲ್ಲಿ ಕಾಣದೇ ಇರುವಂತೆ ಮಾಡುವ ಆಯ್ಕೆಯನ್ನು ಗೂಗಲ್ ನಿಮಗೆ ಕೊಟ್ಟಿದೆ. ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ಕಾಣುವ ನಿಮ್ಮ ಮನೆಯನ್ನು ಬ್ಲರ್ ಮಾಡಿಕೊಳ್ಳುವ ಆಯ್ಕೆಯನ್ನು ನಿಮಗೆ ಗೂಗಲ್ ಕೊಡಮಾಡಿದೆ. ಆದರೆ ಸ್ಟ್ರೀಟ್ ವ್ಯೂನಲ್ಲಿ ಒಮ್ಮೆ ನಿಮ್ಮ ಮನೆಯನ್ನು ಬ್ಲರ್ ಮಾಡಿದಲ್ಲಿ ಮತ್ತೊಮ್ಮೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ.
ಗೂಗಲ್ ಮ್ಯಾಪ್ಸ್ನಲ್ಲಿ ಸ್ಟ್ರೀಟ್ ವ್ಯೂ ಫೀಚರ್ ತೆರೆದು, ನಿಮ್ಮ ಮನೆಯ ಮುಂದಕ್ಕೆ ವ್ಯೂ ತಂದ ಬಳಿಕ ಆಯ್ಕೆಗಳನ್ನು ಓಪನ್ ಮಾಡಿ, ’ರಿಪೋರ್ಟ್ ಎ ಪ್ರಾಬ್ಲಂ’ ಆಯ್ಕೆ ಮೂಲಕ ನಿಮ್ಮ ಮನೆ ಕಾಣದಂತೆ ಬ್ಲರ್ ಮಾಡಬಹುದಾಗಿದೆ.