
ಪ್ಲಾಸ್ಮಾ ದಾನಿಗಳನ್ನ ಸಂಪರ್ಕಿಸೋದು, ರೆಮಿಡಿಸಿವರ್ ಚುಚ್ಚುಮದ್ದು, ಆಂಬುಲೆನ್ಸ್ ಸೇವೆ ಹೀಗೆ ಕೊರೊನಾ ಸೋಂಕಿತರಿಗೆ ಅವಶ್ಯವಿರುವ ವಸ್ತುಗಳನ್ನ ತಲುಪಿಸೋಕೆ ರಾಜಕಾರಣಿಗಳು, ಸೆಲೆಬ್ರಿಟಿಗಳು, ಸೋಶಿಯಲ್ ಮೀಡಿಯಾ ಸ್ಟಾರ್ಸ್ ಹಾಗೂ ಸಾಮಾನ್ಯ ಜನತೆ ಸಾಮಾಜಿಕ ಜಾಲತಾಣವನ್ನ ಬಳಕೆ ಮಾಡುತ್ತಿದ್ದಾರೆ.
ಬಾಲಿವುಡ್ ನಟ ಸೋನು ಸೂದ್, ಕಮಿಡೀಯನ್ ಅಪೂರ್ವ್ ಗುಪ್ತಾ ಟ್ವಿಟರ್ನ ಸಹಾಯದಿಂದ ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸೋನು ಸೂದ್ ಆಸ್ಪತ್ರೆಗಳಲ್ಲಿ ಬೆಡ್, ಇಂಜೆಕ್ಷನ್, ಮೆಡಿಸಿನ್ಗಾಗಿ ಫೋನ್ಗಳ ಸುರಿಮಳೆಯೇ ಬರ್ತಿದೆ. ಆದರೆ ಎಲ್ಲರಿಗೂ ಸಹಾಯ ಮಾಡಲಾಗದ್ದಕ್ಕೆ ಬೇಸರವಿದೆ ಎಂದಿದ್ದಾರೆ.
ಬೆಳಗ್ಗೆಯಿಂದ ನಾನು ಫೋನ್ನ್ನು ಕೆಳಗೆ ಇಟ್ಟಿಲ್ಲ. ಆಸ್ಪತ್ರೆ ಬೆಡ್, ಮೆಡಿಸಿನ್, ಇಂಜೆಕ್ಷನ್ಗಾಗಿ ಸಾವಿರಗಟ್ಟಲೇ ಫೋನ್ ಬರ್ತಾನೆ ಇರುತ್ತೆ. ಆದರೆ ಎಲ್ಲರಿಗೂ ಅವಶ್ಯವಿರುವ ವಸ್ತುಗಳನ್ನ ಪೂರೈಸಲು ಸಾಧ್ಯವಾಗ್ತಿಲ್ಲ. ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ಹೀಗಾಗಿ ಆದಷ್ಟು ಮನೆಯಲ್ಲೇ ಇರಿ. ಮಾಸ್ಕ್ಗಳನ್ನ ಧರಿಸಿ ಹಾಗೂ ನಿಮ್ಮನ್ನ ನೀವು ಸೋಂಕಿನಿಂದ ಪಾರು ಮಾಡಿಕೊಳ್ಳಿ ಎಂದು ಸೋನು ಸೂದ್ ಟ್ವಿಟರ್ನಲ್ಲಿ ಬರೆದಿದ್ದಾರೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,34,692 ಕೊರೊನಾ ಸೋಂಕು ವರದಿಯಾಗಿದೆ. ಹಾಗೂ ಒಂದೇ ದಿನದಲ್ಲಿ 1341 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,45,26,609 ಹಾಗೂ ಸಾವಿನ ಸಂಖ್ಯೆ 1,75,649 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
https://twitter.com/Chatterj1Asking/status/1382861385466474501