ನವದೆಹಲಿ: ದೇಶಾದ್ಯಂತ ಕೊರೊನಾ ಭೀತಿ ಜೊತೆ ಇದೀಗ ರೂಪಾಂತರ ಸೋಂಕಿನ ಆತಂಕ ಹೆಚ್ಚಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಜನವರಿ 2ರಿಂದ ಲಸಿಕೆ ವಿತರಣೆ ತಾಲೀಮು ಆರಂಭಿಸಲು ಸೂಚಿಸಿದೆ.
ಈಗಾಗಲೇ ಆಂಧ್ರಪ್ರದೇಶ, ಗುಜರಾತ್, ಅಸ್ಸಾಂ ಹಾಗೂ ಪಂಜಾಬ್ ನಲ್ಲಿ ಕೊರೊನಾ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದ್ದು, ಇದೀಗ ಜನವರಿ 2ರಿಂದ ದೇಶದ ಎಲ್ಲಾ ರಾಜ್ಯಗಳಲ್ಲೂ ಡ್ರೈ ರನ್ ನಡೆಸಲು ಸೂಚಿಸಲಾಗಿದೆ.
ಡ್ರೈ ರನ್ ವೇಳೆ ಕೊರೊನಾ ಲಸಿಕೆ ವಿತರಣೆ ಕುರಿತು ಪ್ಲಾನಿಂಗ್, ಮಾನಿಟರ್ ಮಾಡುವ ಕೋ ವಿನ್ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಡೇಟಾ ಎಂಟ್ರಿ, ವ್ಯಾಕ್ಸಿನ್ ಪಡೆದುಕೊಂಡವರ ಜೊತೆಗಿನ ಒಡನಾಟ, ಲಸಿಕೆ ಪಡೆದ ಬಳಿಕ ಸಂಭವಿಸಬಹುದಾದ ಘಟನೆ ನಿಭಾಯಿಸುವ ರೀತಿ, ಕೋಲ್ಡ್ ಸ್ಟೋರೇಜ್, ಟ್ರಾನ್ಸ್ ಪೋರ್ಟ್ ಪರಿಶೀಲನೆ ಡ್ರೈರನ್ ಉದ್ದೇಶವಾಗಿದೆ.