ವಿಶ್ವಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರುವ ಕಾರಣ ಜನರು ಕೊರೊನಾ ಲಸಿಕೆ, ಎಂದು ಮಾರುಕಟ್ಟೆಗೆ ಬರುತ್ತೆ ಎಂಬ ಪ್ರಶ್ನೆ ಹಾಕ್ತಿದ್ದಾರೆ. ವಿಶ್ವದಾದ್ಯಂತ ಅನೇಕ ಕಂಪನಿಗಳು ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸುತ್ತಿವೆ.
ಈ ಮಧ್ಯೆ ಅಮೆರಿಕಾದ ನೋವಾವಾಕ್ಸ್ ಇಂಕ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಲಸಿಕೆ ತಯಾರಿಸುವ ಒಪ್ಪಂದವನ್ನು ಘೋಷಿಸಿದೆ. ನೊವಾವಾಕ್ಸ್ ಇಂಕ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ 2021 ರಲ್ಲಿ 2 ಬಿಲಿಯನ್ ಡೋಸ್ ಎನ್ವಿಎಕ್ಸ್-ಸಿಒವಿ 2373 ಅನ್ನು ಉತ್ಪಾದಿಸಲಿದೆ.
ಆಗಸ್ಟ್ ನಲ್ಲಿ ನೋವಾವಾಕ್ಸ್, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ನೊವಾವಾಕ್ಸ್ ವಿಶ್ವದ ಅತಿದೊಡ್ಡ ಲಸಿಕೆಗಳನ್ನು ಉತ್ಪಾದಿಸುವ ಸೀರಮ್ ಇನ್‌ಸ್ಟಿಟ್ಯೂಟ್‌ನೊಂದಿಗೆ 2 ಬಿಲಿಯನ್ ಡೋಸ್‌ಗಳನ್ನು ಉತ್ಪಾದಿಸುವ ಒಪ್ಪಂದಕ್ಕೆ ಸಹಿ ಹಾಕಿತ್ತು. ಅಮೆರಿಕದ ಕಂಪನಿ ನೊವಾವಾಕ್ಸ್ ನ ಲಸಿಕೆ ಪರೀಕ್ಷೆ ಮಧ್ಯ ಹಂತದಲ್ಲಿದೆ.
ಈಗಾಗಲೇ ಮೊದಲ ಹಂತದ ಪರೀಕ್ಷೆ ನಡೆದಿದೆ. ಎರಡನೇ ಹಂತದ ಪರೀಕ್ಷೆ ಡಿಸೆಂಬರ್ ನಲ್ಲಿ ಶುರುವಾಗುವ ನಿರೀಕ್ಷೆಯಿದೆ. ಒಂದು ವೇಳೆ ಎರಡನೇ ಹಂತದ ಪರೀಕ್ಷೆ ಯಶಸ್ವಿಯಾದ್ರೆ 2021ರ ದ್ವಿತೀಯಾರ್ಧದಲ್ಲಿ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.