ಗೋಲ್ಡನ್ ಟೆಂಪಲ್ ಅಂದಾಕ್ಷಣ ನಮಗೆ ನೆನಪಾಗೋದು ಅಮೃತಸರದ ಗುರುದ್ವಾರ. ಮತ್ತೊಂದು ಅದ್ಭುತವಾದ ಸ್ವರ್ಣ ದೇವಾಲಯ ನಮ್ಮಲ್ಲಿದೆ. ಕೇವಲ ಗುಮ್ಮಟ ಮಾತ್ರವಲ್ಲ ದೇವಾಲಯದ ಕಂಬಗಳು, ಪ್ರತಿಮೆಗಳು ಎಲ್ಲವೂ ಶುದ್ಧ ಚಿನ್ನದಿಂದಲೇ ಮಾಡಲ್ಪಟ್ಟಿವೆ.
ಈ ಸುಂದರ ದೇವಾಲಯವಿರೋದು ತಮಿಳುನಾಡಿನ ವೆಲ್ಲೋರ್ ನಲ್ಲಿ. 2007 ರಲ್ಲಿ ಶ್ರೀಪುರಂ ಮಹಾಲಕ್ಷ್ಮಿ ದೇವಾಲಯವನ್ನು ಕಟ್ಟಲಾಗಿದೆ. ಅತಿ ಹೆಚ್ಚು ಅಂದ್ರೆ 1.5 ಟನ್ ಬಂಗಾರದಿಂದ ಮಾಡಲ್ಪಟ್ಟಿರುವ ವಿಶ್ವದ ಏಕೈಕ ದೇವಾಲಯ ಇದು. ಲಕ್ಷ್ಮಿ ನಾರಾಯಣಿ ಮಂಟಪ ವಿಮಾನಂ ಮತ್ತು ಅರ್ಧ ಮಂಟಪಂ ಅನ್ನು ಶುದ್ಧ ಚಿನ್ನದಿಂದ ನಿರ್ಮಿಸಲಾಗಿದೆ.
ತಾಮ್ರದ ಹಾಳೆಗಳ ಮೇಲೆ ಸುಂದರ ಕುಸುರಿ ಕೆತ್ತನೆ ಇರುವ 9-10 ಚಿನ್ನದ ಪದರಗಳನ್ನು ಹಾಕಲಾಗಿದೆ. ದೇವಾಲಯದಲ್ಲಿ ಕೆತ್ತಲಾಗಿರುವ ಪ್ರತಿ ಕಲೆಯಲ್ಲೂ ವೇದಗಳ ವಿವರವಿದೆ. ತಿರುಪತಿ ತಿಮ್ಮಪ್ಪ ದೇವಾಲಯದ 400 ಕ್ಕೂ ಹೆಚ್ಚು ಕುಶಲಕರ್ಮಿಗಳು ಸತತ 6 ವರ್ಷಗಳ ಕಾಲ ಶ್ರಮವಹಿಸಿ ಈ ಅದ್ಭುತ ದೇವಾಲಯವನ್ನು ನಿರ್ಮಿಸಿದ್ದಾರೆ.
ಈ ದೇವಾಲಯ ನಿರ್ಮಾಣಕ್ಕೆ 600 ಕೋಟಿ ರೂಪಾಯಿ ಖರ್ಚಾಗಿದೆ. ಮಲೈಕೊಡಿ ಎಂಬ ಪರ್ವತದ ಅಂಚಿನಲ್ಲಿರುವ ಈ ದೇವಾಲಯದ ವಿಸ್ತೀರ್ಣ 100 ಎಕರೆಗೂ ಅಧಿಕ.