ಆಂಧ್ರಪ್ರದೇಶದ ಖಜಾನೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದ ತೆರಿಗೆ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಈತ ಮಾಡಿದ ಅಕ್ರಮ ಆಸ್ತಿಯ ತನಿಖೆಯೂ ನಡೆದಿತ್ತು.
ಇದೀಗ ಖಜಾನೆ ಅಧಿಕಾರಿ ಕಾರು ಚಾಲಕನ ಮನೆಯ ಮೇಲೆ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ಸಿಕ್ಕ ಅಪಾರ ಪ್ರಮಾಣದ ನಗ – ನಗದನ್ನು ನೋಡಿ ದಂಗಾಗಿ ಹೋಗಿದ್ದಾರೆ.
ಈ ಚಾಲಕನ ಮನೆಯಲ್ಲಿ 2.4 ಕೆಜಿ ಚಿನ್ನ, 84 ಕೆಜಿ ಬೆಳ್ಳಿ, 15 ಲಕ್ಷ ರೂಪಾಯಿ ನಗದು, 49 ಲಕ್ಷ ರೂಪಾಯಿ ಮೌಲ್ಯದ ನಿಶ್ಚಿತ ಠೇವಣಿ ಪತ್ರ, ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್, ಬಂದೂಕು, ಏರ್ ಗನ್, ಒಂದು ಕುದುರೆ ಸೇರಿದಂತೆ ಬೆಲೆಬಾಳುವ ವಸ್ತುಗಳು ಪತ್ತೆಯಾಗಿವೆ.