ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾಸ್ಕ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಮದುವೆಯ ಸಮಯದಲ್ಲಿ ವಧು-ವರರಿಗೆ ವಿವಿಧ ಮಾಸ್ಕ್ ಮಾರುಕಟ್ಟೆಗೆ ಬಂದಿದೆ. ಆಕರ್ಷಕ ಮಾಸ್ಕ್ ಗಳು ಗಮನ ಸೆಳೆಯುತ್ತಿವೆ.
ಪುಣೆಯ ರಾಂಕಾ ಜ್ಯುವೆಲ್ಲರ್ಸ್ ವಿವಾಹದ ಸಮಯದಲ್ಲಿ ವಧುಗಾಗಿ ವಿಶೇಷ ರೀತಿಯ ಚಿನ್ನದ ಮುಖವಾಡವನ್ನು ತಯಾರಿಸಿದ್ದಾರೆ. 124 ಗ್ರಾಂ ಚಿನ್ನದ ಮುಖವಾಡದ ಬೆಲೆ 6.5 ಲಕ್ಷ ರೂಪಾಯಿ. ಕೊರೊನಾದ ಸಂದರ್ಭದಲ್ಲಿ ಇದನ್ನು ಮಾಸ್ಕ್ ಜೊತೆ ನೆಕ್ಲೇಸ್ ರೂಪದಲ್ಲೂ ಧರಿಸಬಹುದು. ಇದನ್ನು 25 ದಿನಗಳಿಗೊಮ್ಮೆ ತೊಳೆದು ಧರಿಸಬಹುದು.
ಇದ್ರ ವಿನ್ಯಾಸಕ್ಕೆ ಮೂರು ವಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಂಕಾ ಜ್ಯುವೆಲ್ಲರ್ಸ್ ಪ್ರಕಾರ, ಮದುವೆಯಂತಹ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರೂ ಮಾಸ್ಕ್ ಧರಿಸುವುದು ಬಹಳ ಮುಖ್ಯ. ಆದ್ದರಿಂದ ನಾವು ವಧು-ವರರಿಗೆ ವಿಶೇಷ ಮಾಸ್ಕ್ ತಯಾರಿಸಲು ಯೋಚಿಸಿದ್ದೇವೆ. ಈ ಮಾಸ್ಕ್ ಗೆ ಬೇಡಿಕೆ ಹೆಚ್ಚಾಗ್ತಿದೆ ಎಂದು ಜ್ಯುವೆಲ್ಲರ್ಸ್ ಮಾಲೀಕರು ಹೇಳಿದ್ದಾರೆ.