ಕೊಲ್ಕತ್ತಾ: ಕೊರೊನಾ ಸಂಹಾರ ಮಾಡುತ್ತಿರುವ ದುರ್ಗೆಯ ಚಿತ್ರ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈರಲ್ ಆಗಿದೆ.
ಕೊಲ್ಕತ್ತಾದಲ್ಲಿ ನವರಾತ್ರಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಬೃಹತ್ ದುರ್ಗಾ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿತ್ತು. ಮೂರ್ತಿ ಕಲಾವಿದರು ಹಾಗೂ ಆಯೋಜಕರು ಈ ಕಾರ್ಯದಲ್ಲಿ ಕ್ರಿಯಾಶೀಲರಾಗಿ ವಿಶೇಷಗಳನ್ನು ಸೃಷ್ಟಿಸುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣಕ್ಕೆ ಅದ್ದೂರಿ ನವರಾತ್ರಿ ಉತ್ಸವ ನಿಷೇಧಿಸಲಾಗಿದೆ. ಇದರಿಂದ ಕಲಾವಿದರು ತಮ್ಮ ಕ್ರಿಯಾಶೀಲತೆಗೆ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ.
ಆಂಬುಲೆನ್ಸ್ ಎದುರು ಬಿಳಿಯ ಕೋಟ್ ಹಾಕಿ ಸ್ಟೆತಸ್ಕೋಪ್ ಹಿಡಿದು ನಿಂತಿರುವ 10 ಕೈಗಳ ದುರ್ಗಾ ಮಾತೆಯ ಚಿತ್ರ ಸೃಷ್ಟಿಸಿದ್ದಾರೆ. ಎದುರಿಗೆ ಕೊರೊನಾ ಸ್ವರೂಪಿ ರಾಕ್ಷಸ ಬಿದ್ದುಕೊಂಡಿದ್ದು, ತ್ರಿಶೂಲದ ಮಾದರಿಯಲ್ಲೇ ಇಂಜಕ್ಷನ್ ನ್ನು ಕೊರೊನಾ ರಾಕ್ಷಸನಿಗೆ ದೇವಿ ಚುಚ್ಚುತ್ತಿದ್ದಾಳೆ. ಮಹಿಷಾಸುರ ಮರ್ದಿನಿಯ ಚಿತ್ರವನ್ನು ಇಲ್ಲಿ ಕೊರೊನಾಕ್ಕೆ ಹೋಲಿಸಲಾಗಿದೆ.
ಕೊರೊನಾಕ್ಕೆ ಮದ್ದು ಮಾಡುತ್ತಿರುವ ದೇವಿಯ ಚಿತ್ರ ಟ್ವಿಟರ್ ನಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡ ಅದನ್ನು ಟ್ವೀಟ್ ಮಾಡಿದ್ದಾರೆ.
https://twitter.com/PushpamKumarS15/status/1318124606851436544?ref_src=twsrc%5Etfw%7Ctwcamp%5Etweetembed%7Ctwterm%5E1318124606851436544%7Ctwgr%5Eshare_3%2Ccontainerclick_1&ref_url=https%3A%2F%2Fwww.news18.com%2Fnews%2Fbuzz%2Fafter-migrant-mother-goddess-durga-reimagined-as-doctor-fighting-coronavirus-in-kolkata-pandal-2981213.html