
54 ಸೆಕೆಂಡ್ನ ಈ ವಿಡಿಯೋದಲ್ಲಿ ವೃದ್ಧೆಯೊಬ್ಬಳು ಕೈಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದು ರಸ್ತೆ ಮಧ್ಯೆ ನಿಂತಿರೋದನ್ನ ನೋಡಬಹುದಾಗಿದೆ.
ಕೆಲವೇ ನಿಮಿಷಗಳಲ್ಲಿ ಆಕೆ ಎದುರು ಬಂದ ಹಳದಿ ಬಣ್ಣದ ಟ್ರಕ್ ಒಂದು ಆಕೆಗೆ ಸರಿಯಾಗಿ ಡಿಕ್ಕಿ ಹೊಡೆದಿದೆ. ಆದರೆ ಆಶ್ಚರ್ಯಕರ ವಿಚಾರ ಅಂದರೆ ಇಷ್ಟೊಂದು ಭೀಕರವಾಗಿ ಕಾಣುವ ಈ ಅಪಘಾತದಿಂದ ವೃದ್ಧೆ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.