ಗೋವಾದಲ್ಲಿ ಉಂಟಾಗಿರುವ ಗೋ ಮಾಂಸ ಕೊರತೆಯನ್ನ ನೀಗಿಸಲು ಇತರೆ ರಾಜ್ಯಗಳಿಂದ ಜೀವಂತ ಗೋವುಗಳನ್ನ ಖರೀದಿ ಮಾಡುತ್ತೇವೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕಳೆದ ಕೆಲ ವಾರಗಳಿಂದ ಕರ್ನಾಟಕದಿಂದ ಗೋವಾಕ್ಕೆ ಗೋ ಮಾಂಸ ಸರಬರಾಜಾಗದ ಕಾರಣ ಕರಾವಳಿ ರಾಜ್ಯ ಸದ್ಯ ಗೋ ಮಾಂಸ ಕೊರತೆಯನ್ನ ಎದುರಿಸುತ್ತಿದೆ.
ಗೋ ಮಾಂಸ ಖರೀದಿ ಮಾಡುವ ಅಧಿಕಾರ ನೋಂದಾಯಿತ ಏಜೆಂಟರಿಗೆ ಇರಲಿದೆ. ರಾಜ್ಯದಲ್ಲಿ ಅಗತ್ಯ ಪ್ರಮಾಣದ ಗೋ ಮಾಂಸ ಪೂರೈಸಲು ಸಾಧ್ಯವಾಗದೇ ಇದ್ದಲ್ಲಿ ಅವರು ನೆರೆ ರಾಜ್ಯಗಳಿಂದ ಗೋವುಗಳನ್ನ ಖರೀದಿ ಮಾಡಿ ಅವುಗಳನ್ನ ಗೋವಾ ಮೀಟ್ ಕಾಂಪ್ಲೆಕ್ಸ್ ಲಿಮಿಟೆಡ್ನಲ್ಲಿ ಹತ್ಯೆ ಮಾಡಬಹುದು ಎಂದು ಹೇಳಿದ್ದಾರೆ.
ಜಿಎಂಸಿಎಎಲ್ ಪಣಜಿಯಿಂದ 45 ಕಿಲೋಮೀಟರ್ ದೂರದಲ್ಲಿರುವ ಉತ್ತರ ಗೋವಾದ ಉಸ್ಗಾವೋ ಗ್ರಾಮದಲ್ಲಿದೆ.