ನವದೆಹಲಿ: ಕೊರುನಾ ಸೋಂಕಿತರಿಗೆ ನೀಡುವ ಫ್ಯಾಬಿಫ್ಲೂ(ಫೆವಿಪಿರವಿರ್) ಮಾತ್ರೆ ದರವನ್ನು ಇಳಿಕೆ ಮಾಡಲಾಗಿದೆ.
ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಈ ಔಷಧ ತಯಾರಿಕೆ ಕಂಪನಿಯಾಗಿದ್ದು ಕಳೆದ ತಿಂಗಳು ಫ್ಯಾಬಿಫ್ಲೂ ಮಾತ್ರೆ ಬಿಡುಗಡೆ ಮಾಡಲಾಗಿತ್ತು. ಪ್ರತಿ ಮಾತ್ರೆಗೆ 103 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಇದನ್ನು ಶೇಕಡ 27 ರಷ್ಟು ಕಡಿತ ಮಾಡಲಾಗಿದ್ದು, ಅಲ್ಪ ಪ್ರಮಾಣದಿಂದ ಮಧ್ಯಮ ಪ್ರಮಾಣದ ಕೊರೋನಾ ರೋಗ ಲಕ್ಷಣಗಳಿರುವ ಸೋಂಕಿತರಿಗೆ ಇದನ್ನು ನೀಡಲಾಗುವುದು ಎನ್ನಲಾಗಿದೆ.
ದೇಶಾದ್ಯಂತ ಕೊರೋನಾ ಸೋಂಕಿತರಿಗೆ ನೆರವಾಗುವ ಉದ್ದೇಶದಿಂದ ದರ ಕಡಿಮೆ ಮಾಡಲಾಗಿದೆ ಎಂದು ಫ್ಯಾಬಿಫ್ಲೂ ತಯಾರಕ ಕಂಪನಿ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ತಿಳಿಸಿದೆ.