ನವದೆಹಲಿ: ಮುಂಬೈ ಮೂಲದ ಗ್ಲೆನ್ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಕಂಪನಿ ಕೊರೋನಾ ತಡೆಗೆ ಔಷಧಗಳನ್ನು ಬಿಡುಗಡೆ ಮಾಡಿದೆ.
ಫ್ಯಾಬಿಫ್ಲೂ ಹೆಸರಿನ ಈ ಮಾತ್ರೆಯನ್ನು ಕೊರೋನಾ ಸೋಂಕಿತರಿಗೆ ನೀಡಿದಲ್ಲಿ ಬೇಗನೆ ಗುಣಮುಖರಾಗಲಿದ್ದಾರೆ. ಫ್ಯಾಬಿಫ್ಲ್ಯೂವಿ ಬ್ರಾಂಡ್ ಹೆಸರಲ್ಲಿ ಆಂಟಿವೈರಲ್ ಔಷಧ ಫಾವಿಪಿರಿವರ್ ಬಿಡುಗಡೆ ಮಾಡಿದ್ದು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ ಉತ್ಪಾದನೆ ಮತ್ತು ಮಾರುಕಟ್ಟೆ ಅನುಮೋದನೆ ಪಡೆದಿದೆ.
ಕೊರೋನಾ ಚಿಕಿತ್ಸೆಗೆ ಫ್ಯಾಬಿಫ್ಲೂವಿ ಅನುಮೋದಿತ ಮೊದಲ ಔಷಧ ಇದಾಗಿದೆ. 103 ರೂಪಾಯಿಯ ಮಾತ್ರೆ ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರಿತ ಔಷಧಿಯಾಗಿ ಲಭ್ಯವಿರುತ್ತದೆ. ದಿನಕ್ಕೆ ಎರಡು ಸಲ 14 ದಿನದವರೆಗೆ ಮಾತ್ರೆ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಕ್ಲಿನಿಕಲ್ ಪ್ರಯೋಗಗಳ ಸಂದರ್ಭದಲ್ಲಿ ಈ ಮಾತ್ರೆ ಕೊರೋನಾ ರೋಗಿಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಗ್ಲೆನ್ ಸಾಲ್ಡಾನಾ ತಿಳಿಸಿದ್ದಾರೆ. ಈ ಮಾತ್ರೆ ಅತಿವೇಗವಾಗಿ ರೋಗಲಕ್ಷಣ ಕಡಿಮೆ ಮಾಡಲಿದೆ. ಶೇಕಡ 88ರಷ್ಟು ವೈದ್ಯಕೀಯ ಸುಧಾರಣೆ ಕಂಡು ಬಂದಿದೆ ಎಂದು ಹೇಳಲಾಗಿದೆ.