
ಯುವತಿಯೊಬ್ಬಳು ಪ್ರೇಮಿ ಮೇಲೆ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಇಬ್ಬರು ಕೆಲ ವರ್ಷಗಳ ಹಿಂದೆ ಫೇಸ್ಬುಕ್ ಮೂಲಕ ಫ್ರೆಂಡ್ ಆಗಿದ್ದರಂತೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯುವಕನನ್ನು ಬಂಧಿಸಿದ್ದಾರೆ.
ಘಟನೆ ಮೀರತ್ ನ ಕಂಕರ್‌ಖೇಡಾದಲ್ಲಿ ನಡೆದಿದೆ. ಇಬ್ಬರು ಫೇಸ್ಬುಕ್ ಮೂಲಕ ಸ್ನೇಹಿತರಾಗಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿದೆ. ನಂತ್ರ ಇಬ್ಬರೂ ಒಂದೇ ಕಡೆ ವಾಸಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಮದುವೆಗೆ ಜಾತಿ ಅಡ್ಡ ಬಂದ ನಂತ್ರ ಇಬ್ಬರು ಬೇರೆಯಾಗಿದ್ದಾರೆ. ಇದಾದ ಮೇಲೆ ಯುವತಿ, ಪ್ರೇಮಿ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.
ಪೊಲೀಸರು ಇಬ್ಬರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹುಡುಗಿ ಕೆಳ ಜಾತಿಯವಳು ಎನ್ನುವ ಕಾರಣಕ್ಕೆ ಹುಡುಗ ಮದುವೆಯಾಗಲು ನಿರಾಕರಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಂತ್ರ ಮುಂದಿನ ಕ್ರಮವೆಂದು ಪೊಲೀಸರು ಹೇಳಿದ್ದಾರೆ.