ನಾಯಿಯೊಂದು ಮಳೆ, ಚಳಿಗೆ ನಡುಗುತ್ತಾ ಸುರುಳಿ ಸುತ್ತಿಕೊಂಡು ರಸ್ತೆಬದಿ ಮಲಗಿತ್ತು. ರಸ್ತೆಯಲ್ಲಿ ನಡೆದಾಡುತ್ತಿದ್ದ ಜನರ್ಯಾರೂ ಅದರ ಕಡೆಗೆ ಕನಿಷ್ಠ ಗಮನ ಕೂಡ ಹರಿಸಲಿಲ್ಲ.
ಪ್ರತಿಯೊಂದರಲ್ಲಿ ಪ್ರೀತಿ ಕಾಣಬೇಕು. ಪ್ರಾಣಿಗಳಿಗೂ ಮನುಷ್ಯರಂತೆಯೇ ಚಳಿ, ಮಳೆ, ಗಾಳಿ, ಬಿಸಿಲಿನ ಅನುಭವ ಆಗುತ್ತದೆ. ತಡೆಯುವ ಶಕ್ತಿ ಅವಕ್ಕೆ ಜಾಸ್ತಿ. ಆದರೂ ಅತಿಯಾದಾಗ ಅವೂ ತಡೆಯುವುದಿಲ್ಲ.
ನಮಗಾದರೂ ಆಯಾ ಕಾಲಕ್ಕೆ ತಕ್ಕಂತೆ, ಕೊಡೆ (ಛತ್ರಿ), ಬೆಚ್ಚಗಿನ ಬಟ್ಟೆಗಳು, ತೆಳುವಾದ ಬಟ್ಟೆ ಹೀಗೆ ವ್ಯವಸ್ಥೆಗಳಿವೆ. ಆದರೆ, ಪ್ರಾಣಿಗಳಿಗೆ ಅಂತಹ ಯಾವ ವ್ಯವಸ್ಥೆಯೂ ಇಲ್ಲ. ಹೀಗೆ ರಸ್ತೆಬದಿ ನಡುಗುತ್ತಾ ಮಲಗಿದ್ದ ನಾಯಿಯನ್ನು ಅಷ್ಟು ಜನರ ಮಧ್ಯೆ ಗಮನಿಸಿದ ಯುವತಿಯೊಬ್ಬಳು, ತನ್ನಲ್ಲಿದ್ದ ಬಟ್ಟೆಯನ್ನು ತೆಗೆದು ನಾಯಿಗೆ ಹೊದಿಸಿ ಬೆಚ್ಚಗಿರುವಂತೆ ಮಾಡುತ್ತಾಳೆ. ಈ ಮಾನವೀಯ ಕಾರ್ಯದ ವಿಡಿಯೋ ಟ್ವಿಟ್ಟರ್ ನಲ್ಲಿ ಸಂಚಲನ ಮೂಡಿಸಿದ್ದು, ನೋಡುಗರು ಕುಳಿತಲ್ಲೇ ಈಕೆಗೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ತಿಳಿಸಿದ್ದಾರೆ.