ಕಳೆದ ಕೆಲ ವಾರಗಳಿಂದ ಕೇಂದ್ರ ಸರ್ಕಾರ ಅಂಗೀಕರಿಸಿದ ಕೃಷಿ ಮಸೂದೆ ವಿರುದ್ಧ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಸಹಾಯಗಳ ಸುರಿಮಳೆಯೇ ಹರಿದು ಬರ್ತಿದೆ.
ಇದೀಗ ಈ ಸಾಲಿಗೆ ನಾಲ್ಕು ವರ್ಷದ ಹುಡುಗ ರೆಹಾನ್ ಕೂಡ ಸೇರಿದ್ದಾನೆ. ಗಾಜಿಯಾಬಾದ್ನ ವೈಶಾಲಿ ಪ್ರದೇಶದಲ್ಲಿರುವ ಪ್ರತಿಭಟನಾ ಸ್ಥಳಕ್ಕೆ ತಂದೆ ಮೆಹತಾಬ್ ಆಲಂ ಜೊತೆ ಬಂದ ರೆಹಾನ್ ರೈತರಿಗೆ ಬಿಸ್ಕತ್ ಹಾಗೂ ಬಾಳೆಹಣ್ಣನ್ನ ನೀಡಿದ್ದಾನೆ.
ಕೇವಲ 20 ಸಾವಿರ ರೂಪಾಯಿ ಆದಾಯವನ್ನ ಹೊಂದಿರುವ ಆಲಂ ತನ್ನ ಕಿರಿಯ ಮಗ ರೆಹಾನ್ ಜೊತೆ ಪ್ರತಿಭಟನಾ ಸ್ಥಳಕ್ಕೆ ತೆರಳಿ ಕಳೆದ 10 ದಿನಗಳಿಂದ ಬಿಸ್ಕೇಟ್ ಹಾಗೂ ಬಾಳೆಹಣ್ಣನ್ನ ನೀಡುತ್ತಿದ್ದಾನೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಆಲಂ, ನಾನು ಕೂಡ ಬಿಹಾರದ ರೈತ ಕುಟುಂಬದವನು. ರೈತರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.