
ಗಾಜಿಯಾಬಾದ್ ಪೊಲೀಸ್ ಇಲಾಖೆಗೆ ಸೇರಿದ ಎರಡೂವರೆ ವರ್ಷದ ಶ್ವಾನವೊಂದು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಸಿಬ್ಬಂದಿಗೆ ನೆರವಾಗಿದೆ. ಲೀನಾ ಹೆಸರಿನ ಈ ನಾಯಿ ನೀಡಿದ ಸುಳಿವನ್ನು ಆಧರಿಸಿ ಮೂವರು ಶಂಕಿತರನ್ನು ಬಂಧಿಸಲಾಗಿದೆ.
ತನ್ನೀ ಕಾರ್ಯಕ್ಕೆ ಲೀನಾಗೆ 10,000 ರೂ.ಗಳ ಬಹುಮಾನ ಸಿಕ್ಕಿದ್ದು, ಜೊತೆಯಲ್ಲಿ ವಿಶೇಷವಾದ ಚರ್ಮದ ಸ್ಟ್ರಾಪ್ ಹಾಗೂ ವೆಲ್ವೆಟ್ ಬೆಡ್ ಒಂದು ಸಿಕ್ಕಿದೆ.
ವಿವೇಕ್ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ, ಆತನಿಂದ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡು ಹೋಗಿದ್ದ ಮೂವರು ಕೊಲೆಗಾರರನ್ನು ಪೊಲೀಸರು ಈಗ ಬಂಧಿಸಿದ್ದಾರೆ.
https://twitter.com/ghaziabadpolice/status/1271056839275196417?ref_src=twsrc%5Etfw%7Ctwcamp%5Etweetembed%7Ctwterm%5E1271056839275196417&ref_url=https%3A%2F%2Fwww.news18.com%2Fnews%2Fbuzz%2Fghaziabad-police-dog-leena-helps-catch-murder-suspects-wins-rs-10000-award-2666513.html