ಹಿಂದಿ ಹೇರಿಕೆಯ ವಿರುದ್ಧ ದಕ್ಷಿಣದ ರಾಜ್ಯಗಳಲ್ಲಿ ತೀವ್ರ ವಿರೋಧದ ನಡುವೆಯೇ ಹಿಂದಿ ದಿವಸವನ್ನು ದೇಶಾದ್ಯಂತ ಆಚರಿಸಲಾಗಿದೆ. ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಈ ದಿನವನ್ನು ಆಚರಣೆ ಮಾಡಲಾಗಿದೆ.
ಇದೇ ವೇಳೆ, ಭಾರತದಲ್ಲಿರುವ ಜರ್ಮನಿ ರಾಯಭಾರಿ ವಾಲ್ಟರ್ ಜೆ ಲಿಂಡರ್ ತಮ್ಮದೇ ವಿಡಿಯೋವೊಂದನ್ನು ಮಾಡಿಕೊಂಡು, ಹಿಂದಿಯಲ್ಲಿಯೇ ಮಾತನಾಡಿ ಹಿಂದಿ ದಿವಸದ ಶುಭಾಶಯ ಕೋರಿದ್ದಾರೆ.
“ಇಂದು ಹಿಂದಿ ದಿವಸ. ನೀವು ಹೇಗಿದ್ದೀರಿ? ನನ್ನ ಹಿಂದಿ ಅಷ್ಟಾಗಿ ಉತ್ತಮವಾಗಿಲ್ಲ. ಆದರೆ ಪ್ರತಿನಿತ್ಯ ನಾನು ಏನಾದರೊಂದು ಹೊಸದನ್ನು ಕಲಿಯುತ್ತಿದ್ದೇನೆ. ಮುಂದೊಂದು ದಿನ ನನ್ನ ಹಿಂದಿ ಉತ್ತಮವಾಗಲಿದೆ. ನಾವು ಆ ದಿನ ಮತ್ತೊಮ್ಮೆ ಭೇಟಿ ಮಾಡೋಣ,” ಎಂದು ವಿಡಿಯೋದಲ್ಲಿ ಲಿಂಡರ್ ಹೇಳಿದ್ದಾರೆ.