alex Certify ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರಿ ಪ್ರೀತಿಯಲ್ಲಿ ಬಿದ್ದು ಪತ್ನಿಗೆ ವಿಚ್ಛೇದನ ನೀಡಲು ಮುಂದಾದ ಪತಿ

ಬಿಹಾರದ ಗಯಾದಲ್ಲಿ ವ್ಯಕ್ತಿಯೊಬ್ಬ ಸಹೋದರಿ ಪ್ರೀತಿಯಲ್ಲಿ ದಾಂಪತ್ಯ ಮರೆತಿದ್ದಾನೆ. ಸಹೋದರಿಯನ್ನು ಪ್ರೀತಿಸುತ್ತಿರುವ ಪತಿ, ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.

2016ರಲ್ಲಿ ನಿತಿನ್ ಲಾಲ್ ಹಾಗೂ ರಾಣಿಗೆ ಮದುವೆಯಾಗಿತ್ತು. ಮದುವೆಯಾದ ಕೆಲ ದಿನಗಳಲ್ಲೇ ನಿತಿನ್ ಲಾಲ್, ಸಂಬಂಧದಲ್ಲಿ ಸಹೋದರಿಯಾಗಬೇಕಾಗಿದ್ದ ಶಿಲ್ಪಾಳನ್ನು ಪ್ರೀತಿಸುತ್ತಿದ್ದಾನೆಂಬುದು ಗೊತ್ತಾಗಿತ್ತಂತೆ. ಆದ್ರೆ ಇನ್ಮುಂದೆ ಸಂಬಂಧ ಮುಂದುವರೆಯುವುದಿಲ್ಲವೆಂದು ನಿತಿನ್ ಲಾಲ್ ಹೇಳಿದ್ದನಂತೆ. ಕೆಲ ದಿನಗಳ ನಂತ್ರ ನಿತಿನ್ ಲಾಲ್ ಹಳೆ ಚಟ ಮುಂದುವರೆಸಿದ್ದ.

ಹುಟ್ಟಲಿರುವ ಮಗುವಿನ ಲಿಂಗ ಬಹಿರಂಗಪಡಿಸಲು ಹೋಗಿ ಎಡವಟ್ಟು ಮಾಡಿಕೊಂಡ ತಂದೆ

ರಾಣಿ ಕೆಲ ದಿನಗಳ ಹಿಂದೆ ತವರಿಗೆ ಹೋಗಿದ್ದಳಂತೆ. ಮೊನ್ನೆ ಮನೆಗೆ ವಾಪಸ್ ಆದಾಗ ಗಂಡ, ಅತ್ತೆ, ರಾಣಿಗೆ ಹೊಡೆದು ಮನೆಯಿಂದ ಹೊರ ಹಾಕಿದ್ದಾರೆ. ರಾತ್ರಿಯಿಡಿ ಮನೆ ಮುಂದೆ ಕಳೆದ ರಾಣಿ ಬೆಳಿಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಹಿಂದೆಯೂ ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ದೂರು ನೀಡಿದ್ದೆ. ಆದ್ರೆ ಯಾವುದೇ ಪ್ರಯೋಜನವಾಗಿರಲಿಲ್ಲವೆಂದು ರಾಣಿ ಹೇಳಿದ್ದಾಳೆ. ಶಿಲ್ಪಾ ಪ್ರೀತಿಗೆ ಬಿದ್ದಿರುವ ಪತಿ ವಿಚ್ಛೇದನ ಕೇಳುತ್ತಿದ್ದಾನೆಂದು ರಾಣಿ ಆರೋಪ ಮಾಡಿದ್ದಾಳೆ. ಈಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...