ಬಿಜೆಪಿ ಮುಖಂಡ ಮತ್ತು ಪೂರ್ವ ದೆಹಲಿಯ ಸಂಸದ ಗೌತಮ್ ಗಂಭೀರ್, ಜಿಬಿ ರಸ್ತೆ ಲೈಂಗಿಕ ಕಾರ್ಯಕರ್ತೆಯರ ಹೆಣ್ಣುಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ದೆಹಲಿಯ ಲೈಂಗಿಕ ಕಾರ್ಯಕರ್ತೆಯರ 25 ಅಪ್ರಾಪ್ತ ಹೆಣ್ಣು ಮಕ್ಕಳನ್ನು ನೋಡಿಕೊಳ್ಳುವುದಾಗಿ ಗಂಭೀರ್ ಹೇಳಿದ್ದಾರೆ. ಶುಕ್ರವಾರದಿಂದಲೇ ಈ ಬಗ್ಗೆ ಕೆಲಸ ಶುರುವಾಗಲಿದೆ ಎಂದು ಗಂಭೀರ್ ಹೇಳಿದ್ದಾರೆ.
ಶುಕ್ರವಾರ ಗೌತಮ್ ಗಂಭೀರ್ ಅಜ್ಜಿಯ ಜನ್ಮದಿನ. ಹಾಗಾಗಿ ಇದೇ ದಿನ ಅಭಿಯಾನವನ್ನು ಪ್ರಾರಂಭಿಸಲು ಅವರು ಇಚ್ಛಿಸಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಹಕ್ಕಿದೆ. ಈ ಮಕ್ಕಳು ಕೂಡ ತಮ್ಮ ಹಕ್ಕನ್ನು ಪಡೆಯಲಿ. ಕನಸನ್ನು ಈಡೇರಿಸಿಕೊಳ್ಳಲಿ ಎಂಬುದು ನನ್ನ ಆಸೆ ಎಂದು ಗಂಭೀರ್ ಹೇಳಿದ್ದಾರೆ.
ಮಕ್ಕಳ ಜೀವನೋಪಾಯ, ಶಿಕ್ಷಣ ಮತ್ತು ಆರೋಗ್ಯ ನೋಡಿಕೊಳ್ಳುತ್ತೇನೆಂದು ಗಂಭೀರ್ ಹೇಳಿದ್ದಾರೆ. ಸದ್ಯ 10 ಬಾಲಕಿಯರನ್ನು ಆಯ್ಕೆ ಮಾಡಲಾಗಿದೆ. ಅವರೆಲ್ಲ ಸದ್ಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆಂದು ಗಂಭೀರ್ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರಿಗೆ ನೆರವಾಗುತ್ತೇನೆ. ಕನಿಷ್ಠ 25 ಬಾಲಕಿಯರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆಂದು ಗಂಭೀರ್ ಹೇಳಿದ್ದಾರೆ.