alex Certify ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಈ ಆಸ್ಪತ್ರೆಯಲ್ಲಿದೆ ಚಿಕಿತ್ಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭದಲ್ಲಿರುವಾಗಲೇ ಮಗುವಿಗೆ ಸಂಸ್ಕಾರ ಕಲಿಸಲು ಈ ಆಸ್ಪತ್ರೆಯಲ್ಲಿದೆ ಚಿಕಿತ್ಸೆ

ತಾಯಿ ಗರ್ಭದಲ್ಲಿದ್ದಾಗಲೇ ಕೃಷ್ಣನ ಮಾತುಗಳನ್ನ ಕೇಳಿ ಅಭಿಮನ್ಯು ಚಕ್ರವ್ಯೂಹ ವಿದ್ಯೆ ಕಲಿತ ಕತೆ ಎಲ್ಲರಿಗೂ ತಿಳಿದೇ ಇದೆ. ಇದೀಗ ಬನಾರಸ್​ ಹಿಂದೂ ವಿಶ್ವವಿದ್ಯಾಲಯ ಹಾಗೂ ಸರ್​ ಸುಂದರ್​ ಲಾಲ್​​ ಆಸ್ಪತ್ರೆ ಈ ಕತೆಗಳನ್ನ ಆಧಾರವಾಗಿಟ್ಟುಕ್ಕೊಂಡು ಗರ್ಭದಲ್ಲಿರುವ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಚಿಕಿತ್ಸೆ ಆರಂಭಿಸಿದ್ದಾರೆ.

ಗರ್ಭ ಸಂಸ್ಕಾರ ಎಂಬ ಈ ಚಿಕಿತ್ಸೆಯನ್ನ ಗರ್ಭಿಣಿಯರಿಗೆ ನೀಡಲಾಗುತ್ತೆ. ಸೆಪ್ಟೆಂಬರ್​ ತಿಂಗಳಿಂದ ಈ ಹೊಸ ಚಿಕಿತ್ಸೆ ಶುರುವಾಗಿದೆ. ಗರ್ಭ ಸಂಸ್ಕಾರ ಚಿಕಿತ್ಸೆ ಹೊಸ ವಿಷಯವೇನಲ್ಲ. ಆರ್ಯುವೇದದಲ್ಲಿ ಬಹಳ ಹಿಂದಿನಿಂದಲೂ ಇರುವ ಚಿಕಿತ್ಸಾ ವಿಧಾನವಿದು.

ಆದರೆ ಇದಕ್ಕೆ ಸರಿಯಾದ ಪ್ರಾಮುಖ್ಯತೆ ಸಿಕ್ಕಿರಲಿಲ್ಲ. ಇದೀಗ ನಾವು ಈ ಚಿಕಿತ್ಸೆಯನ್ನ ಪ್ರಾರಂಭಿಸಿದ್ದೇವೆ ಅಂತಾ ಸರ್​ ಸುಂದರ್​ ಲಾಲ್​ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಎಸ್​.ಕೆ. ಮಾಥೂರ್​ ಹೇಳಿದ್ರು.

ಈ ಚಿಕಿತ್ಸೆಯನ್ನ ಪಡೆಯುವ ಗರ್ಭಿಣಿಯರಿಗೆ ಉತ್ತಮ ಸಂಗೀತ, ಉತ್ತಮ ಸಾಹಿತ್ಯ ಹಾಗೂ ಸಕಾರಾತ್ಮಕ ಭಾವನೆಗಳನ್ನ ಬಿತ್ತುವಂತಹ ಧಾರವಾಹಿಗಳನ್ನ ತೋರಿಸಲಾಗುತ್ತೆ. ಇದು ಗರ್ಭದಲ್ಲಿರುವ ಮಗುವಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಅನ್ನೋದನ್ನ ವೈಜ್ಞಾನಿಕ ತಂತ್ರಗಳ ಮೂಲ ಪರಿಶೀಲನೆ ಮಾಡಲಾಗುತ್ತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...