alex Certify ಕೋವಿಡ್ ನ ಎರಡು ಡೋಸ್ ನಡುವೆ ಇರಬೇಕು ಈ ಅಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ನ ಎರಡು ಡೋಸ್ ನಡುವೆ ಇರಬೇಕು ಈ ಅಂತರ

ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಕೊಡಲಾಗುವ ಎರಡು ಚುಚ್ಚುಮದ್ದುಗಳ ನಡುವೆ 28 ದಿನಗಳ ಅಂತರ ಇರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಚುಚ್ಚುಮದ್ದಿನ ಪರಿಣಾಮವು 14 ದಿನಗಳ ಬಳಿಕ ಮಾತ್ರವೇ ಆಗುವ ಕಾರಣ ಈ ಅಂತರ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಜನವರಿ 16ರಿಂದ ಕೋವಿಡ್-19 ಲಸಿಕೆ ಕಾರ್ಯಕ್ರಮ ಆರಂಭವಾಗಲಿದ್ದು, ಸಾಂಕ್ರಾಮಿಕ ಸಂಕಟದ ದಿನಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಾರ್ವಜನಿಕ ಕೆಲಸ ಮಾಡುತ್ತಿರುವ ಮೂರು ಕೋಟಿಯಷ್ಟು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಆದ್ಯತೆ ಕೊಡಲಾಗುವುದು.

ಎರಡು ಲಸಿಕೆಗಳಾದ ಆಕ್ಸಫರ್ಡ್‌ನ ಕೋವಿಶೀಲ್ಡ್‌ ಹಾಗೂ ಸೀರಮ್ & ಭಾರತ್‌ ಬಯೋಟೆಕ್ ಅವರ ಕೋವ್ಯಾಕ್ಸಿನ್ ಚುಚ್ಚುಮದ್ದುಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮತಿ ಕೊಡಲಾಗಿದೆ. ಈ ಎರಡೂ ಲಸಿಕೆಗಳು ಸುರಕ್ಷಿತವಾಗಿದ್ದು, ಜನರ ರೋಗನಿರೋಧಕ ಶಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ ಎಂದು ಆರೋಗ್ಯ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ ಪೌಲ್ ಮಾತನಾಡಿ, ಸಾವಿರಾರು ಮಂದಿಯ ಮೇಲೆ ಈ ಎರಡು ಲಸಿಕೆಗಳನ್ನು ಪ್ರಯೋಗ ಮಾಡಲಾಗಿದ್ದು, ಯಾವುದೇ ರೀತಿಯ ದೊಡ್ಡ ರಿಸ್ಕ್ ಕಂಡು ಬಂದಿಲ್ಲ. ಈ ಲಸಿಕೆಗಳು ಸುರಕ್ಷಿತವಾಗಿವೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...