ಮುಂಬೈನಲ್ಲಿ 80ಕ್ಕೂ ಹೆಚ್ಚು ಕೇಸ್ಗಳ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ರವಿ ಪೂಜಾರಿಯನ್ನ ಇಂದು ಬೆಳಗ್ಗೆ ಮುಂಬೈಗೆ ಕರೆತರಲಾಗಿದೆ. ಕಳೆದ ವಾರ ಬೆಂಗಳೂರು ಕೋರ್ಟ್ನಲ್ಲಿ ಸುದೀರ್ಘ ಒಂದು ವರ್ಷದ ವಾದ – ವಿವಾದದ ಬಳಿಕ ಮುಂಬೈ ಪೊಲೀಸರಿಗೆ ಪೂಜಾರಿ ಕಸ್ಟಡಿ ನೀಡಲಾಗಿದೆ.
ರಾಜು ಪೂಜಾರಿ ಕಸ್ಟಡಿಗಾಗಿ ನಾವು 1 ವರ್ಷಗಳಿಂದ ಕಾಯುತ್ತಲೇ ಇದ್ದೇವೆ. ಕೊನೆಗೂ ನಮ್ಮ ಕಾಯುವಿಕೆ ಅಂತ್ಯವಾಗಿದೆ ಎಂದು ಮಹಾರಾಷ್ಟ್ರ ಅಪರಾಧ ವಿಭಾಗದ ಜಂಟಿ ಕಮಿಷನರ್ ಮಿಲಿಂದ್ ಭಾರಂಬೆ ಮಾಹಿತಿ ನೀಡಿದ್ದಾರೆ.
ರವಿ ಪೂಜಾರಿ ಮಾರ್ಚ್ 9ನೇ ತಾರೀಖಿನವರೆಗೂ ಮುಂಬೈ ಪೊಲೀಸರ ಕಸ್ಟಡಿಯಲ್ಲೇ ಇರಲಿದ್ದಾನೆ .
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ 59 ವರ್ಷದ ಭೂಗತಪಾತಕಿ ರವಿ ಪೂಜಾರಿಯನ್ನ 2020ರ ಫೆಬ್ರವರಿ ತಿಂಗಳಲ್ಲಿ ಕರ್ನಾಟಕ ಪೊಲೀಸರು ಸೆನೆಗಲ್ನಲ್ಲಿ ಬಂದಿಸಿ ಬೆಂಗಳೂರಿಗೆ ಕರೆ ತಂದಿದ್ದರು.