
ಜೈಪುರ್: ರಾಜಸ್ತಾನದ ಬಾರ್ಮೆರ್ ನ ಶಾಸ್ತ್ರೀನಗರದಲ್ಲಿ ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಕಳೆದ ಒಂದು ವರ್ಷದಿಂದ ಸಹೋದರಿಯರ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಇಬ್ಬರ ವಿರುದ್ದ ಕೇಸು ದಾಖಲಾಗಿದೆ. ಪೊಲೀಸ್ ಇಲಾಖೆಯ ಸರ್ಕಲ್ ಅಧಿಕಾರಿ ಪುಷ್ಪೇಂದ್ರ ಈ ಕುರಿತು ಮಾಹಿತಿ ನೀಡಿದ್ದು, ಶಾಸ್ತ್ರೀನಗರದಲ್ಲಿ ಒಂದು ವರ್ಷದಿಂದ ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಅಲ್ಲದೇ, ಈ ಕೃತ್ಯಕ್ಕೆ ನೆರವು ನೀಡಿದ ಇಬ್ಬರು ಮಹಿಳೆಯರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.