ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯ ಮೂರ್ತಿಗಳನ್ನು ಅನೇಕ ರೀತಿಯ ವಸ್ತುಗಳಿಂದ ರಚಿಸಲಾಗಿದೆ.
ಗುಜರಾತ್‌ನ ಸೂರತ್‌ನ ಡಾ. ಅದಿತಿ ಮಿತ್ತಲ್ ಎಂಬುವವರು ಸಹ ಈ ಬ್ಯಾಂಡ್ ವ್ಯಾಗನ್ ಸೇರಿಕೊಂಡಿದ್ದು, ಬಾದಾಮಿ, ಖರ್ಜೂರ, ಒಣ ದ್ರಾಕ್ಷಿಗಳಂತ ಒಣ ಹಣ್ಣುಗಳನ್ನು ಬಳಸಿಕೊಂಡು ಗಣೇಶನ ವಿಗ್ರಹವನ್ನು ಮಾಡಿದ್ದಾರೆ.
20 ಇಂಚಿನ ಈ ಪರಿಸ್ನೇಹಿ ಗಣೇಶನ ಮೂರ್ತಿಯನ್ನು ಮಾಡಲು ವಾಲ್ ನಟ್‌ಗಳು, ಕಡ್ಲೆ ಬೀಜ, ಗೋಡಂಬಿ, ಪೈನ್ ನಟ್‌ಗಳನ್ನೂ ಸಹ ಬಳಸಲಾಗಿದೆ. ಈ ಗಣೇಶ ಮೂರ್ತಿಯನ್ನು ವಿಸರ್ಜಿಸುವ ಬದಲಿಗೆ, ಕೋವಿಡ್-19 ಆಸ್ಪತ್ರೆಯಲ್ಲಿಟ್ಟು, ಅಲ್ಲಿರುವ ರೋಗಿಗಳಿಗೆ ವಿತರಿಸಲು ನಿರ್ಧರಿಸಲಾಗಿದೆ.
ಕೊರೊನಾ ಅಬ್ಬರದಿಂದಾಗಿ ಈ ವರ್ಷ ಗಣೇಶೋತ್ಸವಕ್ಕೆ ಸ್ವಲ್ಪ ಮಂಕು ಬಡಿದಿದ್ದರೂ ಸಹ ಇತಿಮಿತಿಗಳ ನಡುವೆಯೇ ಸಂಭ್ರಮಕ್ಕೆ ಬಣ್ಣವನ್ನು ತುಂಬಲಾಗುತ್ತಿದೆ.